ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೇರುಪೇಟೆಯಲ್ಲಿ ಕರಡಿ ಕುಣಿತ ಅಬಾಧಿತ

ಕೊರೊನಾ ಸೃಷ್ಟಿಸಿದ ಆರ್ಥಿಕ ಹಿಂಜರಿತದ ಭೀತಿ; ವಿದೇಶಿ ಬಂಡವಾಳ ಹೊರಹರಿವು
Last Updated 20 ಮಾರ್ಚ್ 2020, 5:15 IST
ಅಕ್ಷರ ಗಾತ್ರ

ಮುಂಬೈ: ದೇಶದ ಷೇರುಪೇಟೆಗಳನ್ನು ಕೊರೊನಾ ವೈರಸ್‌ ಸಂಪೂರ್ಣವಾಗಿ ಆವರಿಸಿದ್ದು, ದಿನದಿಂದ ದಿನಕ್ಕೆ ಕರಡಿ ಕುಣಿತ ತೀವ್ರಗೊಳ್ಳುತ್ತಲೇ ಇದೆ. ಸತತ ನಾಲ್ಕು ದಿನಗಳಿಂದಲೂ ಷೇರುಪೇಟೆಯ ವಹಿವಾಟು ಭಾರಿ ಏರಿಳಿತ ಕಾಣುತ್ತಿದ್ದು, ನಕಾರಾತ್ಮಕ ಚಲನೆ ಮುಂದುವರಿದಿದೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಗುರುವಾರ ಆರಂಭದ ವಹಿವಾಟಿನಲ್ಲಿ 2,100 ಅಂಶಗಳವರೆಗೂ ಕುಸಿತ ದಾಖಲಿಸಿತ್ತು. ಮಧ್ಯಾಹ್ನದ ಬಳಿಕ ಸಕಾರಾತ್ಮಕ ಹಾದಿಗೆ ಮರಳಿ 400 ಅಂಶಗಳವರೆಗೆ ಏರಿಕೆ ಕಂಡಿತ್ತು. ಆದರೆ ಮತ್ತೆ ಇಳಿಕೆ ಹಾದಿ ಹಿಡಿಯಿತು. ಹೀಗೆ ನಡೆದ ಚಂಚಲ ವಹಿವಾಟಿನಿಂದಾಗಿ ಸೂಚ್ಯಂಕ 2,656 ಅಂಶಗಳವರೆಗೂ ಏರಿಳಿಯಿತು. ದಿನದ ಅಂತ್ಯದಲ್ಲಿ 581 ಅಂಶಗಳ ಇಳಿಕೆಯೊಂದಿಗೆ 28,288 ಅಂಶಗಳಿಗೆ ತಲುಪಿತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 205 ಅಂಶ ಇಳಿಕೆ ಕಂಡು 8,263 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ. ಆರ್ಥಿಕತೆಯ ಮೇಲೆ ಕೊರೊನಾ ಬೀರಲಿರುವ ಪರಿಣಾಮದ ಆತಂಕದಿಂದಾಗಿ ಜಾಗತಿಕ ಮಾರುಕಟ್ಟೆಗಳಲ್ಲಿಯೂ ನಕಾರಾತ್ಮಕ ವಹಿವಾಟು ನಡೆಯಿತು.

ದಕ್ಷಿಣ ಕೊರಿಯಾದ ಕೋಸ್ಪಿ ಸೂಚ್ಯಂಕ ಶೇ 8ರಷ್ಟು ಗರಿಷ್ಠ ಕುಸಿತ ಕಂಡಿತು. ಹಾಂಗ್‌ ಸೆಂಗ್‌, ನಿಕೇಯ್‌ ಮತ್ತು ಶಾಂಘೈ ಕಾಂಪೊಸಿಟಿವ್‌ ಸೂಚ್ಯಂಕಗಳೂ ಇಳಿಕೆ ಕಂಡಿವೆ. ಯುರೋಪಿನ ಕೇಂದ್ರೀಯ ಬ್ಯಾಂಕ್‌ ₹60 ಲಕ್ಷ ಕೋಟಿ ಪ್ಯಾಕೇಜ್‌ ಘೋಷಿಸಿದೆ. ಇದು ಯುರೋಪಿನ ಷೇರುಪೇಟೆಗಳಲ್ಲಿ ಸಕಾರಾತ್ಮಕ ವಹಿವಾಟಿಗೆ ಕಾರಣವಾಯಿತು.

ಗರಿಷ್ಠ ನಷ್ಟ ಅನುಭವಿಸಿದ ಕಂಪನಿಗಳು

ಬಜಾಜ್‌ ಫೈನಾನ್ಸ್ ಶೇ 10.24,ಮಾರುತಿ ಸುಜುಕಿ ಶೇ 9.85,ಆ್ಯಕ್ಸಿಸ್ ಬ್ಯಾಂಕ್‌ ಶೇ 9.50,ಮಹೀಂದ್ರಾ ಶೇ 9.28,ಟೆಕ್‌ ಮಹೀಂದ್ರಾ ಶೇ 8.43,ಒಎನ್‌ಜಿಸಿ ಶೇ 7.35.

ಮಾರ್ಚ್‌ 2 ರಿಂದ 19ರವವರೆಗೆ ವಿದೇಶಿ ಬಂಡವಾಳ ಹೊರಹರಿವು75 ಸಾವಿರ ಕೋಟಿಯಷ್ಟಾಗಿದೆ.ದಿನದ ವಹಿವಾಟಿನಲ್ಲಿ ಬಿಎಸ್‌ಇ ಮಧ್ಯಮ ಮತ್ತು ಸಣ್ಣ ಶ್ರೇಣಿ ಸೂಚ್ಯಂಕಗಳ ಇಳಿಕೆ ಶೇ 4.53.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT