ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾನ್‌, ತಂಬಾಕು ಖರೀದಿ: ಕುಟುಂಬದ ತಿಂಗಳ ಖರ್ಚು ಏರಿಕೆ

Published 3 ಮಾರ್ಚ್ 2024, 15:41 IST
Last Updated 3 ಮಾರ್ಚ್ 2024, 15:41 IST
ಅಕ್ಷರ ಗಾತ್ರ

ನವದೆಹಲಿ: ಪ್ರತಿ ಕುಟುಂಬವು ಪ್ರತಿ ತಿಂಗಳಿನ ಆದಾಯದಲ್ಲಿ ಪಾನ್‌, ತಂಬಾಕು ಸೇರಿದಂತೆ ಇತರೆ ಅಮಲು ಭರಿಸುವ ಪದಾರ್ಥಗಳ ಖರೀದಿಗೆ ಮಾಡುವ ವೆಚ್ಚವು ಒಂದು ದ‌ಶಕದ ಅವಧಿಯಲ್ಲಿ ಏರಿಕೆಯಾಗಿದೆ ಎಂದು ಕುಟುಂಬ ಗೃಹ ಬಳಕೆ ವೆಚ್ಚ ಸಮೀಕ್ಷೆಯು (ಎಚ್‌ಸಿಇಎಸ್‌) ಹೇಳಿದೆ.

2011–12ರಲ್ಲಿ ಗ್ರಾಮೀಣ ಪ್ರದೇಶದಲ್ಲಿ ಈ ಪದಾರ್ಥಗಳ ಖರೀದಿಗೆ ಪ್ರತಿ ಕುಟುಂಬದ ವೆಚ್ಚವು ಶೇ 3.2ರಷ್ಟಿತ್ತು. 2022–23ರ ವೇಳೆಗೆ ಶೇ 3.79ಕ್ಕೆ ಏರಿಕೆಯಾಗಿದೆ. ನಗರ ಪ್ರದೇಶದಲ್ಲಿ ವೆಚ್ಚದ ಪ್ರಮಾಣವು ಶೇ 1.61ರಿಂದ ಶೇ 2.43ಕ್ಕೆ ಹೆಚ್ಚಳವಾಗಿದೆ ಎಂದು ಕಳೆದ ವಾರ ಬಿಡುಗಡೆಯಾಗಿರುವ 2022–23ರ ಸಮೀಕ್ಷಾ ವರದಿ ತಿಳಿಸಿದೆ.

ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ಅಡಿಯಲ್ಲಿ ಬರುವ ರಾಷ್ಟ್ರೀಯ ಮಾದರಿ ಸಮೀಕ್ಷೆ ಕಚೇರಿಯು (ಎನ್‌ಎಸ್‌ಎಸ್‌ಒ) ಈ ಸಮೀಕ್ಷೆ ನಡೆಸಿದೆ.

ಆದರೆ, ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಶಿಕ್ಷಣಕ್ಕಾಗಿ ಮಾಡುವ ವೆಚ್ಚವು ಗಣನೀಯವಾಗಿ ಇಳಿಕೆಯಾಗಿದೆ ಎಂದು ವರದಿ ತಿಳಿಸಿದೆ. ನಗರ ಪ್ರದೇಶಗಳಿಗೆ ಶಿಕ್ಷಣಕ್ಕೆ ಮಾಡುವ ವೆಚ್ಚವು ಹತ್ತು ವರ್ಷಗಳ ಅವಧಿಯಲ್ಲಿ ಶೇ 6.90ರಿಂದ ಶೇ 5.78ಕ್ಕೆ ಕುಸಿದಿದೆ. 

ಗ್ರಾಮೀಣ ಪ್ರದೇಶದ ಸ್ಥಿತಿಯೂ ಇದಕ್ಕಿಂತ ಹೊರತಾಗಿಲ್ಲ. ಶಿಕ್ಷಣಕ್ಕಾಗಿ ಭರಿಸುವ ವೆಚ್ಚವು ಶೇ 3.49ರಿಂದ ಶೇ 3.30ಕ್ಕೆ ಇಳಿಕೆಯಾಗಿದೆ.  

ಪಾನೀಯಗಳು ಮತ್ತು ಸಂಸ್ಕರಿಸಿದ ಆಹಾರ ಖರೀದಿಗೆ ಭರಿಸುವ ವೆಚ್ಚವೂ ಹೆಚ್ಚಳವಾಗಿದೆ. 2011–12ರಲ್ಲಿ ನಗರ ಪ್ರದೇಶಗಳಲ್ಲಿ ಶೇ 8.98ರಷ್ಟಿತ್ತು. 2022–23ರಲ್ಲಿ ಶೇ 10.64ಕ್ಕೆ ಏರಿಕೆಯಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಶೇ 7.90ರಿಂದ ಶೇ 9.62ಕ್ಕೆ ಹೆಚ್ಚಳವಾಗಿದೆ. 

ಸಾಗಣೆ ವೆಚ್ಚವು ನಗರ ಪ್ರದೇಶದಲ್ಲಿ ಶೇ 6.52ರಿಂದ ಶೇ 8.59ಕ್ಕೆ ಹೆಚ್ಚಳವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಶೇ 4.20ರಿಂದ ಶೇ 7.55ಕ್ಕೆ ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT