ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚುನಾವಣಾ ಬಾಂಡ್‌ ವಿವಾದ: ಮತ್ತೆ ಕುಸಿದ ಎಸ್‌ಬಿಐ ಷೇರು

Published 12 ಮಾರ್ಚ್ 2024, 14:27 IST
Last Updated 12 ಮಾರ್ಚ್ 2024, 14:27 IST
ಅಕ್ಷರ ಗಾತ್ರ

ಮುಂಬೈ: ಚುನಾವಣಾ ಬಾಂಡ್‌ ಬಗ್ಗೆ ಮಾಹಿತಿ ಹಂಚಿಕೊಳ್ಳುವಂತೆ ಸುಪ್ರೀಂ ಕೋರ್ಟ್‌ ತಾಕೀತು ಮಾಡಿದ ಬೆನ್ನಲ್ಲೇ ಸತತ ಎರಡನೇ ದಿನವಾದ ಮಂಗಳವಾರ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಷೇರಿನ ಮೌಲ್ಯ ಶೇ 1.90ರಷ್ಟು ಇಳಿಕೆ ಆಗಿದೆ. 

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ನಲ್ಲಿ ಶೇ 1.82ರಷ್ಟು ಮತ್ತು ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿಯಲ್ಲಿ ಶೇ 1.90ರಷ್ಟು ಕುಸಿದಿದೆ. ಪ್ರತಿ ಷೇರಿನ ಬೆಲೆ ಕ್ರಮವಾಗಿ ₹759.40 ಮತ್ತು ₹759ಕ್ಕೆ ಮುಟ್ಟಿದೆ. ಸೋಮವಾರ ಷೇರಿನ ಮೌಲ್ಯ ಶೇ 2ರಷ್ಟು ಕುಸಿದಿತ್ತು.

ಸೂಚ್ಯಂಕಗಳು ಚೇತರಿಕೆ: ಎಚ್‌ಡಿಎಫ್‌ಸಿ ಬ್ಯಾಂಕ್‌, ಟಿಸಿಎಸ್‌ ಮತ್ತು ರಿಲಯನ್ಸ್‌ ಇಂಡಸ್ಟ್ರೀಸ್‌ ಷೇರುಗಳ ಖರೀದಿ ಹೆಚ್ಚಿದ್ದರಿಂದ ಷೇರುಪೇಟೆ ಸೂಚ್ಯಂಕಗಳು ಚೇತರಿಕೆ ಕಂಡಿವೆ.

ಸೆನ್ಸೆಕ್ಸ್‌ 165 ಅಂಶ ಹೆಚ್ಚಳವಾಗಿ 73,667ಕ್ಕೆ ಸ್ಥಿರಗೊಂಡಿತು. ದಿನದ ವಹಿವಾಟಿನಲ್ಲಿ 501 ಅಂಶ ಏರಿಕೆಯಾಗಿತ್ತು. ನಿಫ್ಟಿ 3 ಅಂಶ ಏರಿಕೆಯಾಗಿ, 22,335ಕ್ಕೆ ಅಂತ್ಯಗೊಂಡಿತು.

ಟಿಸಿಎಸ್‌, ಮಾರುತಿ, ಇನ್ಫೊಸಿಸ್‌, ರಿಲಯನ್ಸ್‌ ಇಂಡಸ್ಟ್ರೀಸ್‌ ಮತ್ತು ಭಾರ್ತಿ ಏರ್‌ಟೆಲ್‌ ಷೇರಿನ ಮೌಲ್ಯ ಏರಿಕೆ ಆಗಿದೆ.

ಜೆಎಸ್‌ಡಬ್ಲ್ಯು ಸ್ಟೀಲ್‌, ಐಟಿಸಿ, ಟಾಟಾ ಮೋಟರ್ಸ್‌, ಅಲ್ಟ್ರಾಟೆಕ್‌ ಸಿಮೆಂಟ್‌ ಮತ್ತು ನೆಸ್ಟ್ಲೆ ಷೇರಿನ ಮೌಲ್ಯ ಇಳಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT