ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬ್ಬು ಅರೆಯುವಿಕೆಗೆ ವೇಗ: ಎಐಎಸ್‌ಟಿಎ

Published 28 ನವೆಂಬರ್ 2023, 13:52 IST
Last Updated 28 ನವೆಂಬರ್ 2023, 13:52 IST
ಅಕ್ಷರ ಗಾತ್ರ

ನವದೆಹಲಿ: 2023-24ರ ಋತುವಿನಲ್ಲಿ ಕಬ್ಬು ಅರೆಯುವ ಕಾರ್ಯವು ದೀಪಾವಳಿಯ ನಂತರ ದೇಶಾದ್ಯಂತ ಭರದಿಂದ ಸಾಗುತ್ತಿದೆ ಎಂದು ಅಖಿಲ ಭಾರತ ಸಕ್ಕರೆ ವ್ಯಾಪಾರಿಗಳ ಒಕ್ಕೂಟ (ಎಐಎಸ್‌ಟಿಎ) ಮಂಗಳವಾರ ತಿಳಿಸಿದೆ.

ಕೆಲವು ಕಾರ್ಖಾನೆಗಳು ಅಕ್ಟೋಬರ್ ತಿಂಗಳ ಮಧ್ಯದಲ್ಲಿ ಕಬ್ಬಿ ಅರೆಯುವಿಕೆ ಆರಂಭಿಸಿದವು. ದೀಪಾವಳಿಯ ನಂತರ ವೇಗ ಪಡೆದುಕೊಂಡಿದೆ ಎಂದು ಒಕ್ಕೂಟದ ಅಧ್ಯಕ್ಷ ಪ್ರಫುಲ್ ವಿಠಲಾನಿ ತಿಳಿಸಿದ್ದಾರೆ.

ದೇಶದಲ್ಲಿ 700ಕ್ಕೂ ಹೆಚ್ಚು ಸಕ್ಕರೆ ಕಾರ್ಖಾನೆಗಳು ಇದ್ದು, 340 ಲಕ್ಷ ಟನ್‌ನಷ್ಟು ಕಬ್ಬು ಅರೆಯುವ ಸಾಮರ್ಥ್ಯ ಹೊಂದಿವೆ. ದೇಶದ ಒಟ್ಟು ಕಬ್ಬು ಉತ್ಪಾದನೆಯು 2022–23ರ ಬೆಳೆ ವರ್ಷದಲ್ಲಿ (ಜುಲೈ–ಜೂನ್‌) 42.22 ಕೋಟಿ ಟನ್‌ನಷ್ಟು ಇತ್ತು. ಇದಕ್ಕೆ ಹೋಲಿಸಿದರೆ 2023-24ರ ಬೆಳೆ ವರ್ಷದಲ್ಲಿ 43.47 ಕೋಟಿ ಟನ್‌ಗಳಿಗೆ ಏರಿಕೆ ಆಗುವ ಅಂದಾಜು ಮಾಡಲಾಗಿದೆ ಎಂದು ಕೃಷಿ ಸಚಿವಾಲಯ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT