ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಾಟಾ ಮೋಟರ್ಸ್‌ ಲಾಭ ಮೂರು ಪಟ್ಟು ಹೆಚ್ಚಳ

Published 10 ಮೇ 2024, 13:58 IST
Last Updated 10 ಮೇ 2024, 13:58 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಪ್ರಮುಖ ವಾಹನ ತಯಾರಿಕಾ ಕಂಪನಿ ಟಾಟಾ ಮೋಟರ್ಸ್‌, 2023–24ನೇ ಹಣಕಾಸು ವರ್ಷದ ಮಾರ್ಚ್‌ ತ್ರೈಮಾಸಿಕದಲ್ಲಿ ₹17,528 ಕೋಟಿ ನಿವ್ವಳ ಲಾಭ ಗಳಿಸಿದೆ. 

2022–23ರ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ₹5,496 ಕೋಟಿ ಲಾಭ ಗಳಿಸಿತ್ತು. ಇದಕ್ಕೆ ಹೋಲಿಸಿದರೆ ಲಾಭದಲ್ಲಿ ಮೂರು ಪಟ್ಟು ಏರಿಕೆಯಾಗಿದೆ. ವರಮಾನವು ₹1.05 ಲಕ್ಷ ಕೋಟಿಯಿಂದ ₹1.19 ಲಕ್ಷ ಕೋಟಿಗೆ ಹೆಚ್ಚಳವಾಗಿದೆ ಎಂದು ಕಂಪನಿಯು, ಷೇರುಪೇಟೆಗೆ ಮಾಹಿತಿ ನೀಡಿದೆ.

ಪ್ರಮುಖವಾಗಿ, ಜಾಗ್ವರ್‌ ಲ್ಯಾಂಡ್ ರೋವರ್‌ (ಜೆಎಲ್‌ಆರ್‌) ಮಾರಾಟ ಉತ್ತಮವಾಗಿರುವುದೇ  ಲಾಭ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ತಿಳಿಸಿದೆ.

ಜಾಗ್ವರ್‌ ಲ್ಯಾಂಡ್‌ ರೋವರ್‌ ವರಮಾನದಲ್ಲಿ ಶೇ 11ರಷ್ಟು ಏರಿಕೆಯಾಗಿದ್ದು, ₹82,661 ಕೋಟಿಗೆ ಮುಟ್ಟಿದೆ. ಜೆಎಲ್‌ಆರ್‌ನ ತೆರಿಗೆ ನಂತರದ ಲಾಭವು ₹2,709 ಕೋಟಿಯಿಂದ ₹14,647 ಕೋಟಿಗೆ ಹೆಚ್ಚಳವಾಗಿದೆ ಎಂದು ತಿಳಿಸಿದೆ.

2023–24ರ ಪೂರ್ಣ ಹಣಕಾಸು ವರ್ಷದಲ್ಲಿ ಕಂಪನಿಯು ₹31,806 ಕೋಟಿ ಲಾಭ ಗಳಿಸಿದೆ. ಹಿಂದಿನ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ₹2,689 ಕೋಟಿ ಲಾಭ ಗಳಿಸಿದೆ. ವರಮಾನವು ₹3.45 ಲಕ್ಷ ಕೋಟಿಯಿಂದ ₹4.37 ಲಕ್ಷ ಕೋಟಿಗೆ ಏರಿಕೆಯಾಗಿದೆ. 

‘ಭಾರತದಲ್ಲಿ ಕಂಪನಿಯ ವ್ಯವಹಾರವು ಸಾಲ ಮುಕ್ತವಾಗಿದೆ. 2024–25ನೇ ಆರ್ಥಿಕ ವರ್ಷದಲ್ಲಿ ಇಡೀ ಕಂಪನಿಯನ್ನು ಸಾಲ ಮುಕ್ತವಾಗಿಸುವ ಹಾದಿಯಲ್ಲಿದ್ದೇವೆ. ಹಾಗಾಗಿ, ಮುಂದಿನ ವರ್ಷಗಳಲ್ಲಿ ಉತ್ತಮ ಸಾಮರ್ಥ್ಯ ತೋರಲಿದ್ದೇವೆ’ ಎಂದು ಕಂಪನಿಯ ಮುಖ್ಯ ಹಣಕಾಸು ಅಧಿಕಾರಿ ಪಿ.ಬಿ. ಬಾಲಾಜಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT