ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಾಟಾ ಟೆಕ್ನಾಲಜೀಸ್‌ ಐಪಿಒ: ಷೇರು ಬೆಲೆ ₹ 475–500

Published 16 ನವೆಂಬರ್ 2023, 13:15 IST
Last Updated 16 ನವೆಂಬರ್ 2023, 13:15 IST
ಅಕ್ಷರ ಗಾತ್ರ

ಮುಂಬೈ: ಟಾಟಾ ಟೆಕ್ನಾಲಜೀಸ್‌ ಕಂಪನಿಯು ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಮೂಲಕ ₹3,042 ಕೋಟಿ ಬಂಡವಾಳ ಸಂಗ್ರಹಿಸಲು ಮುಂದಾಗಿದೆ. ಕಂಪನಿಯು ಪ್ರತಿ ಷೇರಿಗೆ ₹475–500 ಬೆಲೆ ನಿಗದಿ ಮಾಡಿದೆ.

ನವೆಂಬರ್ 22 ರಿಂದ 24ರವರೆಗೆ ಬಿಡ್‌ ಸಲ್ಲಿಸಲು ಅವಕಾಶ ಇರಲಿದೆ. ಆ್ಯಂಕರ್‌ ಇನ್‌ವೆಸ್ಟರ್ಸ್‌ ಒಂದು ದಿನ ಮುಂಚಿತವಾಗಿಯೇ ಅಂದರೆ ನವೆಂಬರ್ 21ರಂದು ಬಿಡ್‌ ಸಲ್ಲಿಸಬಹುದಾಗಿದೆ ಎಂದು ಕಂಪನಿಯು ತಿಳಿಸಿದೆ.

ಸರಿ ಸುಮಾರು ಎರಡು ದಶಕಗಳಲ್ಲಿ ಐಪಿಒಗೆ ಬರುತ್ತಿರುವ ಟಾಟಾ ಸಮೂಹದ ಮೊದಲ ಕಂಪನಿ ಇದಾಗಿದೆ. ಈ ಹಿಂದೆ 2004ರಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್‌ ಐಪಿಒಗೆ ಬಂದಿತ್ತು.

ಆಫರ್ ಫಾರ್ ಸೇಲ್‌ (ಒಎಫ್‌ಎಸ್) ಮೂಲಕ ಒಟ್ಟು 6.08 ಕೋಟಿ ಷೇರುಗಳನ್ನು ಮಾರಾಟ ಮಾಡಲು ಕಂಪನಿ ಉದ್ದೇಶಿಸಿದೆ. ಇದರಲ್ಲಿ 20.28 ಲಕ್ಷ ಷೇರುಗಳನ್ನು ಉದ್ಯೋಗಿಗಳಿಗೆ ಮತ್ತು60.85 ಲಕ್ಷ ಷೇರುಗಳನ್ನು ಟಾಟಾ ಮೊಟರ್ಸ್‌ನ ಷೇರುದಾರರಿಗೆ ಮೀಸಲಿಡಲಾಗಿದೆ. ಹೂಡಿಕೆದಾರರು ಕನಿಷ್ಠ 30 ಈಕ್ವಿಟಿ ಷೇರುಗಳಿಗೆ ಬಿಡ್‌ ಸಲ್ಲಿಸಬಹುದು ಎಂದು ಕಂಪನಿ ಮಾಹಿತಿ ನೀಡಿದೆ.

ನವೆಂಬರ್ 30 ಅಥವಾ ಡಿಸೆಂಬರ್ 1ರಂದು ಬಿಎಸ್‌ಇ ಮತ್ತು ಎನ್‌ಎಸ್‌ಇನಲ್ಲಿ ಕಂಪನಿಯ ಷೇರುಗಳು ವಹಿವಾಟಿಗೆ ಮುಕ್ತವಾಗುವ ನಿರೀಕ್ಷೆ ಇದೆ. ಜೆಎಂ ಫೈನಾನ್ಶಿಯಲ್‌, ಸಿಟಿಗ್ರೂಪ್‌ ಗ್ಲೋಬಲ್ ಮಾರ್ಕೆಟ್ಸ್‌ ಇಂಡಿಯಾ ಮತ್ತು ಬಿಒಎಫ್ಎ ಸೆಕ್ಯುರಿಟೀಸ್‌ ಇಂಡಿಯಾ ಕಂಪನಿಗಳು ಐಪಿಒದ ನಿರ್ವಹಣೆ ಮಾಡಲಿವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT