‘ಫಾರಂ 16’ ಪರಿಷ್ಕರಣೆ

ಮಂಗಳವಾರ, ಏಪ್ರಿಲ್ 23, 2019
33 °C

‘ಫಾರಂ 16’ ಪರಿಷ್ಕರಣೆ

Published:
Updated:

ನವದೆಹಲಿ: ಆದಾಯ ತೆರಿಗೆ ಇಲಾಖೆಯು ಫಾರಂ 16 (ಅರ್ಜಿ ನಮೂನೆ 16) ಪರಿಷ್ಕರಣೆಗೊಳಿಸಿದೆ. 2019ರ ಮೇ 12 ರಿಂದ ಇದು ಜಾರಿಗೆ ಬರಲಿದೆ.

ಆದಾಯ ತೆರಿಗೆದಾರರು 2018–19ನೇ ಹಣಕಾಸು ವರ್ಷದ ಆದಾಯ ತೆರಿಗೆ ಲೆಕ್ಕಪತ್ರವನ್ನು ಈ ಪರಿಷ್ಕೃತ ಅರ್ಜಿ ನಮೂನೆಯಲ್ಲಿಯೇ ಸಲ್ಲಿಸಬೇಕಾಗುತ್ತದೆ.

ಮನೆ ಬಾಡಿಗೆಯಿಂದ ಬರುವ ವರಮಾನ, ವಿವಿಧ ಉಳಿತಾಯ ಯೋಜನೆಗಳಲ್ಲಿನ ತೆರಿಗೆ ಕಡಿತ, ತೆರಿಗೆ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ, ಬೇರೆ ಮೂಲಗಳಿಂದ ಬರುವ ಆದಾಯ ಮತ್ತು ವಿವಿಧ ಭತ್ಯೆಗಳನ್ನೂ ಒಳಗೊಂಡು ಇನ್ನೂ ಕೆಲವು ವಿವರಗಳನ್ನು ಅರ್ಜಿ ನಮೂನೆಯಲ್ಲಿ ಸೇರಿಸಿದೆ.

ಮೂಲದಲ್ಲಿ ತೆರಿಗೆ ಕಡಿತ (ಟಿಡಿಎಸ್‌) ಆಗಿರುವ ಮಾಹಿತಿಗಳನ್ನು ಒಳಗೊಂಡಿರುವುದೇ ‘ಫಾರಂ 16’ ಆಗಿದೆ. ವಾರ್ಷಿಕ ಆದಾಯ ಲೆಕ್ಕಪತ್ರ ಸಲ್ಲಿಸುವಾಗ ಈ ಮಾಹಿತಿಗಳನ್ನು ನೀಡಬೇಕಾಗುತ್ತದೆ.

ಉದ್ಯೋಗದಾತರು ತೆರಿಗೆ ಇಲಾಖೆಗೆ ನೀಡಬೇಕಿರುವ ‘ಫಾರಂ 24’ ಸಹ ಪರಿಷ್ಕರಣೆ ಮಾಡಲಾಗಿದೆ. ನೌಕರರು ಆಸ್ತಿ ಖರೀದಿ ಅಥವಾ ಮನೆ ನಿರ್ಮಾಣಕ್ಕೆ ಬ್ಯಾಂಕೇತರ ಸಂಸ್ಥೆಗಳಿಂದ ಸಾಲ ಪಡೆದಿದ್ದರೆ ಆ ಸಂಸ್ಥೆಯ ‘ಪ್ಯಾನ್‌’ ಮಾಹಿತಿಯನ್ನು ಕಡ್ಡಾಯವಾಗಿ ನೀಡಬೇಕಾಗುತ್ತದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !