ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಟಿಐಜಿಸಿ’ಗೆ ಸೂರ್ಯಕುಮಾರ್ ಯಾದವ್ ಬ್ರ್ಯಾಂಡ್ ರಾಯಭಾರಿ

Last Updated 5 ಮಾರ್ಚ್ 2023, 20:13 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಮೂಲದ ‘ದಿ ಇಂಡಿಯನ್ ಗ್ಯಾರೇಜ್ ಕಂಪನಿ’, ಪುರುಷರ ಫ್ಯಾಶನ್ ಬ್ರ್ಯಾಂಡ್‍ಗಳಲ್ಲಿ ಒಂದಾದ ‘ಟಿಐಜಿಸಿ’ಗೆ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಅವರನ್ನು ರಾಯಭಾರಿಯನ್ನಾಗಿ ನೇಮಿಸಿದೆ.

ಯಾದವ್ ಅವರು ಟಿಐಜಿಸಿಯ ಬ್ರ್ಯಾಂಡ್ ರಾಯಭಾರಿ ಆಗಿ ಎಲ್ಲ ಅಭಿಯಾನಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಕಂಪನಿಯ ಜೊತೆಗಿನ ಪಾಲುದಾರಿಕೆ ಬಗ್ಗೆ ಯಾದವ್ ಅವರು, ‘ನನಗೆ ಫ್ಯಾಷನ್ ಮತ್ತೆ ಸ್ಟೈಲ್ ಉಡುಗೆ ಬಹಳ ಇಷ್ಟ. ಈ ಬ್ರ್ಯಾಂಡ್ ಮೂಲಕ, ಅಭಿಮಾನಿಗಳೊಂದಿಗೆ ನನ್ನ ಫ್ಯಾಷನ್ ಸೆನ್ಸ್ ಹಂಚಿಕೊಳ್ಳಲು ಉತ್ಸುಕನಾಗಿದ್ದೇನೆ’ ಎಂದು ಹೇಳಿದ್ದಾರೆ.

ದಿ ಇಂಡಿಯನ್ ಗ್ಯಾರೇಜ್ ಕಂಪನಿ ಸಂಸ್ಥಾಪಕ ಮತ್ತು ಸಿಇಒ ಅನಂತ್ ಟಾಂಟೆಡ್ ಅವರು, ‘ಯಾದವ್ ಅವರನ್ನು ರಾಯಭಾರಿಯಾಗಿ ಹೊಂದುತ್ತಿರುವುದು ಸಂತಸದ ವಿಷಯ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT