ಮಂಗಳವಾರ, ಆಗಸ್ಟ್ 16, 2022
20 °C

ಅಲ್ಟ್ರಾಫ್ರೆಶ್‌ನ ಶೇಕಡ 40ರಷ್ಟು ಷೇರು ಖರೀದಿಸಿದ ಟಿಟಿಕೆ ಪ್ರೆಸ್ಟೀಜ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅತ್ಯಾಧುನಿಕ ವಿನ್ಯಾಸದ ಅಡುಗೆ ಮನೆ ರೂಪಿಸುವ ‘ಅಲ್ಟ್ರಾಫ್ರೆಶ್’ ಕಂಪನಿಯ ಶೇಕಡ 40ಕ್ಕಿಂತ ಹೆಚ್ಚಿನ ಷೇರುಗಳನ್ನು ಖರೀದಿ ಮಾಡಿರುವುದಾಗಿ ಟಿಟಿಕೆ ಪ್ರೆಸ್ಟೀಜ್ ಕಂಪನಿಯು ಸೋಮವಾರ ಹೇಳಿದೆ.

ಅಡುಗೆ ಮನೆಗೆ ಅಗತ್ಯವಿರುವ ಪ್ರೆಷರ್ ಕುಕರ್, ಗ್ಯಾಸ್ ಸ್ಟವ್ ಹಾಗೂ ಇತರ ಉಪಕರಣಗಳ ವಹಿವಾಟಿನಲ್ಲಿ ಎರಡು ಅಂಕಿಗಳ ಬೆಳವಣಿಗೆ ಸಾಧಿಸುವ ಹಾದಿಯಲ್ಲಿ ತಾನಿದ್ದೇನೆ ಎಂದು ಕಂಪನಿಯು ಹೇಳಿದೆ.

ಅತ್ಯಾಧುನಿಕ ವಿನ್ಯಾಸದ ಅಡುಗೆ ಮನೆಗಳನ್ನು ರೂಪಿಸುವ ಉದ್ದಿಮೆಯು ದೇಶದಲ್ಲಿ ₹ 9,500 ಕೋಟಿ ಮೌಲ್ಯದ್ದಾಗಿ ಬೆಳೆದಿದೆ. ಈ ಕ್ಷೇತ್ರ ಪ್ರವೇಶಿಸುವ ಮೂಲಕ ಟಿಟಿಕೆ ಪ್ರೆಸ್ಟೀಜ್ ಬ್ರ್ಯಾಂಡ್, ವಿಶಿಷ್ಟ ಸ್ಥಾನವೊಂದನ್ನು ಪಡೆದಿದೆ. ಅಡುಗೆ ಮನೆಗೆ ಅಗತ್ಯವಿರುವ ಉಪಕರಣಗಳನ್ನೂ ಅಡುಗೆ ಮನೆ ವಿನ್ಯಾಸವನ್ನೂ ಒದಗಿಸುವ ಕಂಪನಿಯಾಗಿ ಹೊರಹೊಮ್ಮಿದೆ ಎಂದು ಪ್ರಕಟಣೆ ತಿಳಿಸಿದೆ.

2021ರಿಂದ 2026ರ ನಡುವಿನ ಅವಧಿಯಲ್ಲಿ ದೇಶದಲ್ಲಿ ಅತ್ಯಾಧುನಿಕ ಅಡುಗೆ ಮನೆ ವಿನ್ಯಾಸಗಳ ಉದ್ದಿಮೆಯ ವಾರ್ಷಿಕ ಸಂಯುಕ್ತ ಬೆಳವಣಿಗೆ ದರವು ಶೇಕಡ 20ರಷ್ಟು ಇರಲಿದೆ ಎಂದು ಅಂದಾಜಿಸಲಾಗಿದೆ. ಮುಂದಿನ ಐದು ವರ್ಷಗಳಲ್ಲಿ ಈ ಉದ್ಯಮದ ವಹಿವಾಟು ₹ 23 ಸಾವಿರ ಕೋಟಿಗೆ ಏರಿಕೆ ಆಗಲಿದೆ ಎಂದು ಟಿಟಿಕೆ ಪ್ರೆಸ್ಟೀಜ್ ಹೇಳಿದೆ.

ಟಿಟಿಕೆ ಪ್ರೆಸ್ಟೀಜ್ ಜೊತೆಗಿನ ಒಪ್ಪಂದದ ಭಾಗವಾಗಿ ಅಲ್ಟ್ರಾಫ್ರೆಶ್ ಕಂಪನಿಯು ಬೆಂಗಳೂರಿನ ಕೋರಮಂಗಲದಲ್ಲಿ ಮಳಿಗೆಯೊಂದನ್ನು ಆರಂಭಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.