ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಂಕ ರಹಿತ ಆಮದು ರಿಯಾಯ್ತಿ ರದ್ದುಪಡಿಸಿದ ಅಮೆರಿಕ ಆಡಳಿತ

ಭಾರತದ 50 ಸರಕುಗಳಿಗೆ ಅನ್ವಯ
Last Updated 1 ನವೆಂಬರ್ 2018, 18:21 IST
ಅಕ್ಷರ ಗಾತ್ರ

ವಾಷಿಂಗ್ಟನ್‌ : ಭಾರತದ 50 ಸರಕುಗಳ ಮೇಲಿನ ಸುಂಕ ರಹಿತ ಆಮದು ರಿಯಾಯ್ತಿಯನ್ನು ಅಮೆರಿಕದ ಡೊನಾಲ್ಡ್‌ ಟ್ರಂಪ್‌ ಆಡಳಿತ ರದ್ದುಪಡಿಸಿದೆ.

ಭಾರತದ ಜತೆಗಿನ ವಾಣಿಜ್ಯ ವಹಿವಾಟಿಗೆ ಸಂಬಂಧಿಸಿದಂತೆ ಟ್ರಂಪ್‌ ಆಡಳಿತ ತಳೆದಿರುವ ಕಠಿಣ ನಿಲುವಿನ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ. 50 ಸರಕುಗಳಲ್ಲಿ ಬಹುತೇಕ ಕೈಮಗ್ಗ ಮತ್ತು ಕೃಷಿ ಸಲಕರಣೆಗಳು ಸೇರಿವೆ.

ಆಮದು ಸುಂಕದಿಂದ ವಿನಾಯ್ತಿ ಪಡೆದಿದ್ದ ಪಟ್ಟಿಯಿಂದ 90 ಸರಕುಗಳನ್ನು ಕೈಬಿಟ್ಟು ಟ್ರಂಪ್‌ ಆಡಳಿತ ಅಧಿಸೂಚನೆ ಹೊರಡಿಸಿದೆ. ಇವುಗಳಲ್ಲಿ ಭಾರತದ 50 ಸರಕುಗಳು ಸೇರಿವೆ. ನವೆಂಬರ್‌ 1ರಿಂದಲೇ ಈ ಆದೇಶ ಜಾರಿಗೆ ಬಂದಿದೆ.

ಈ ಸರಕುಗಳನ್ನು ಆಮದು ಮಾಡಿಕೊಳ್ಳಲು ಯಾವುದೇ ನಿರ್ಬಂಧ ಇಲ್ಲ. ಇವುಗಳು ಪರಮಾಪ್ತ ದೇಶಗಳಿಗೆ ಅನ್ವಯಿಸುವ ಆಮದು ಸುಂಕಗಳಿಗೆ ಒಳಪಟ್ಟಿವೆ ಎಂದು ಅಮೆರಿಕದ ವಾಣಿಜ್ಯ ಪ್ರತಿನಿಧಿ ತಿಳಿಸಿದ್ದಾರೆ.

ಈ ನಿಬಂಧನೆಯು ಯಾವುದೇ ದೇಶದ ವಿರುದ್ಧ ಇಲ್ಲ. ನಿರ್ದಿಷ್ಟ ಸರಕುಗಳಿಗೆ ಮಾತ್ರ ಸಂಬಂಧಿಸಿದೆ. ಭಾರತವು, ಸುಂಕ ರಹಿತ ಆಮದು ವಿನಾಯ್ತಿಯ ಪ್ರಯೋಜನ ಪಡೆಯುವ ಅತಿದೊಡ್ಡ ದೇಶವಾಗಿದೆ.

ಆಯ್ದ ದೇಶಗಳ ಸಾವಿರಾರು ಉತ್ಪನ್ನಗಳನ್ನು ಆಮದು ಸುಂಕದ ವ್ಯಾಪ್ತಿಗೆ ತರದೇ ದ್ವಿಪಕ್ಷೀಯ ವಾಣಿಜ್ಯ ಬಾಂಧವ್ಯ ವೃದ್ಧಿಸುವುದು ಅಮೆರಿಕದ ನೀತಿಗೆ ಅನುಗುಣವಾಗಿತ್ತು. ಈಗ ಅದನ್ನು ಕಠಿಣಗೊಳಿಸಲಾಗಿದೆ.

2017ರಲ್ಲಿ ಅಮೆರಿಕ ಜತೆಗಿನ ಭಾರತದ ಸುಂಕರಹಿತ ವಿನಾಯ್ತಿಗೆ ಒಳಪಟ್ಟಿದ್ದ ಸರಕುಗಳ ರಫ್ತು ವಹಿವಾಟು ₹ 40,320 ಕೋಟಿಗಳಷ್ಟಿತ್ತು.

ಅಮೆರಿಕದ ಈ ನಿರ್ಧಾರದಿಂದ ಭಾರತದ ರಫ್ತು ವಹಿವಾಟಿನ ಮೇಲೆ ಆಗುವ ನಷ್ಟದ ಮೊತ್ತವನ್ನು ತಕ್ಷಣಕ್ಕೆ ಅಂದಾಜು ಮಾಡಲಾಗಿಲ್ಲ. ಸುಂಕ ರಹಿತ ಆಮದು ಪಟ್ಟಿಯಿಂದ ಕೈಬಿಟ್ಟಿರುವ ಸರಕುಗಳನ್ನು ಗಮನಿಸಿದರೆ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಮೇಲೆ ಪ್ರತಿಕೂಲ ಪರಿಣಾಮ ಕಂಡು ಬರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT