ಗುರುವಾರ , ಜೂನ್ 4, 2020
27 °C

ನಿಷ್ಕ್ರಿಯ ಫಾಸ್ಟ್ಯಾಗ್‌: ದುಪ್ಪಟ್ಟು ಟೋಲ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ವಾಹನಗಳಲ್ಲಿ ಫಾಸ್ಟ್ಯಾಗ್‌ ನಿಷ್ಕ್ರಿಯವಾಗಿದ್ದರೆ ದುಪ್ಪಟ್ಟು ಟೋಲ್‌ ಶುಲ್ಕ ಕಟ್ಟಬೇಕಾಗುತ್ತದೆ.

ರಾಷ್ಟ್ರೀಯ ಹೆದ್ದಾರಿ ಶುಲ್ಕ (ದರಗಳ ನಿರ್ಣಯ ಮತ್ತು ಸಂಗ್ರಹ) ನಿಯಮಕ್ಕೆ ತಿದ್ದುಪಡಿ ತಂದು ಇದನ್ನು ಜಾರಿಗೊಳಿಸಲಾಗಿದೆ.

ಈ ಮುಂಚೆ, ಫಾಸ್ಟ್ಯಾಗ್‌ ಇಲ್ಲದೇ ಇರುವ ವಾಹನವು ಫಾಸ್ಟ್ಯಾಗ್‌ ಲೇನ್‌ನಲ್ಲಿ ಪ್ರವೇಶಿಸಿದ್ದರೆ ಎರಡುಪಟ್ಟು ಶುಲ್ಕ ಪಾವತಿಸಬೇಕಾಗುತ್ತಿತ್ತು. ಆದರೆ ಇನ್ನುಮುಂದೆ, ಫಾಸ್ಟ್ಯಾಗ್‌ ಇಲ್ಲದೇ ಇದ್ದರೆ, ಕ್ರಮಬದ್ಧವಾಗಿರದಿದ್ದರೆ ಅಥವಾ ನಿಷ್ಕ್ರಿಯಗೊಂಡಿದ್ದರೂ ನಿರ್ದಿಷ್ಟ ವಾಹನಕ್ಕೆ ವಿಧಿಸುವ ಟೋಲ್‌ನ ಎರಡು ಪಟ್ಟು ಶುಲ್ಕ ಪಾವತಿಸಬೇಕಾಗುತ್ತದೆ’ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ತಿಳಿಸಿದೆ.

2019ರ ಡಿಸೆಂಬರ್‌ 15 ರಿಂದ ಫಾಸ್ಟ್ಯಾಗ್‌ ಕಡ್ಡಾಯಗೊಳಿಸಲಾಗಿದೆ. 2020ರ ಮೇವರೆಗೆ ಒಟ್ಟಾರೆ 1.68 ಕೋಟಿ ಫಾಸ್ಟ್ಯಾಗ್‌ ವಿತರಿಸಲಾಗಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು