ಮಂಗಳವಾರ, ಮೇ 17, 2022
25 °C

ವೋಲ್ವೊ ಕಾರ್ಸ್‌ನ ವ್ಯವಸ್ಥಾಪಕ ನಿರ್ದೇಶಕರಾಗಿ ಜ್ಯೋತಿ ಮಲ್ಹೋತ್ರಾ ನೇಮಕ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ವೋಲ್ವೊ ಕಾರ್ಸ್‌ ಇಂಡಿಯಾ ಕಂಪನಿಯು ಮಾರ್ಚ್‌ 1 ರಿಂದ ಜಾರಿಗೆ ಬರುವಂತೆ ಜ್ಯೋತಿ ಮಲ್ಹೋತ್ರಾ ಅವರನ್ನು ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಿಸಿದೆ.

ಮಲ್ಹೋತ್ರಾ ಅವರು ಸದ್ಯ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ನಿರ್ದೇಶಕ ಆಗಿ ಸೇವೆಯಲ್ಲಿದ್ದಾರೆ. ದೇಶದಲ್ಲಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಆಗುತ್ತಿರುವ ಮೊದಲ ಭಾರತೀಯ ಆಗಿದ್ದಾರೆ. 2016ರಲ್ಲಿ ಅವರು ಕಂಪನಿ ಸೇರಿದ್ದರು.

ಚಾರ್ಲ್ಸ್‌ ಫ್ರಂಪ್‌ ಅವರ ಅವಧಿ ಮುಕ್ತಾಯ ಆಗುತ್ತಿರುವುದರಿಂದ ಮಲ್ಹೋತ್ರಾ ಅವರನ್ನು ಆ ಸ್ಥಾನಕ್ಕೆ ನೇಮಿಸಲಾಗಿದೆ.

ಫ್ರಂಪ್‌ ಅವರ ಅಧಿಕಾರಾವಧಿಯಲ್ಲಿ ಕಂಪನಿಯು ಭಾರತದಲ್ಲಿ ತಯಾರಿಕೆ ಆರಂಭಿಸಿತು. ಹೊಸ ಪೀಳಿಗೆಯ ಮಾದರಿಗಳನ್ನು ಪರಿಚಯಿಸಲಾಯಿತು ಮತ್ತು ದೇಶದಲ್ಲಿ ವೋಲ್ವೊ ವಹಿವಾಟನ್ನು ವಿಸ್ತರಿಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು