ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಪಿಒ, ಐ.ಟಿ ಆಧಾರಿತ ಸೇವಾ ಕಂಪನಿಗಳ ನೇಮಕಾತಿ ಶೇ 16 ಕುಸಿತ

Published 9 ಜನವರಿ 2024, 16:08 IST
Last Updated 9 ಜನವರಿ 2024, 16:08 IST
ಅಕ್ಷರ ಗಾತ್ರ

ಮುಂಬೈ: 2023ರ ಡಿಸೆಂಬರ್‌ನಲ್ಲಿ ಬಿಪಿಒ ಮತ್ತು ಐ.ಟಿ ಆಧಾರಿತ ಸೇವಾ ಕಂಪನಿಗಳು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ನೇಮಕಾತಿಯು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ 16ರಷ್ಟು ಕುಸಿದಿದೆ ಎಂದು ನೌಕರಿ ಡಾಟ್‌ ಕಾಂ ಹೇಳಿದೆ.

ಬಿಪಿಒ ಶೇ 17, ಶಿಕ್ಷಣ ಶೇ 11, ರೀಟೆಲ್‌ ಶೇ 11 ಮತ್ತು ಆರೋಗ್ಯ ಕ್ಷೇತ್ರದಲ್ಲಿ ಶೇ 10ರಷ್ಟು ನೇಮಕಾತಿ ಕುಸಿದಿದೆ. ಐ.ಟಿ ವಲಯದಲ್ಲಿ ಶೇ 21ರಷ್ಟು ಇಳಿಕೆ ಆಗಿದ್ದು, ಉದ್ಯೋಗಾಕಾಂಕ್ಷಿಗಳಲ್ಲಿ ನಿರಾಶೆ ಮೂಡಿಸಿದೆ ಎಂದು ತಿಳಿಸಿದೆ.

ಆದರೆ ದತ್ತಾಂಶ ನಿರ್ವಹಣೆ ವಿಭಾಗ, ಐ.ಟಿ ಇನ್ಫಾಸ್ಟ್ರಕ್ಚರ್‌ ಎಂಜಿನಿಯರಿಂಗ್ ಮತ್ತು ಆಟೊಮೇಷನ್‌ ಎಂಜಿನಿಯರಿಂಗ್‌ ವಿಭಾಗದಲ್ಲಿನ ನೇಮಕಾತಿಗೆ ಧಕ್ಕೆಯಾಗಿಲ್ಲ. 

ಹಿಂದಿನ ವರ್ಷದ ಡಿಸೆಂಬರ್‌ಗೆ ಹೋಲಿಸಿದರೆ ಆತಿಥ್ಯ ವಲಯದಲ್ಲಿ ಶೇ 4 ಹಾಗೂ ಫಾರ್ಮಾ ಕ್ಷೇತ್ರದಲ್ಲಿ ಶೇ 2ರಷ್ಟು ಹೊಸ ಉದ್ಯೋಗಗಳು ಸೃಷ್ಟಿಯಾಗಿವೆ. ಈ ಹೊಸ ಉದ್ಯೋಗಗಳ ಕೊಡುಗೆಯಲ್ಲಿ ಅಹಮದಾಬಾದ್, ವಡೋದರಾ ಮತ್ತು ಮುಂಬೈನ ಪಾಲು ದೊಡ್ಡದಿದೆ ಎಂದು ತಿಳಿಸಿದೆ. 

ಬೆಂಗಳೂರಿನಲ್ಲಿ ಕುಸಿತ:

ಡಿಸೆಂಬರ್‌ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ಹೊಸ ನೇಮಕಾತಿಯು ಶೇ 23ರಷ್ಟು ಕುಸಿದಿದೆ. ಉಳಿದಂತೆ ಚೆನ್ನೈ ಶೇ 24, ಹೈದರಾಬಾದ್‌ ಶೇ 23, ಪುಣೆ ಶೇ 17 ಮತ್ತು ಕೋಲ್ಕತ್ತದಲ್ಲಿ ಶೇ 16ರಷ್ಟು ಇಳಿಕೆಯಾಗಿದೆ ಎಂದು ನೌಕರಿ ಡಾಟ್‌ಕಾಂ ತಿಳಿಸಿದೆ.

ಡಿಸೆಂಬರ್‌ನಲ್ಲಿ ಐ.ಟಿಯೇತರ ವಲಯದಲ್ಲಿನ ನೇಮಕಾತಿಯು ಶೇ 2ರಷ್ಟು ಬೆಳವಣಿಗೆ ದಾಖಲಿಸಿದೆ. ಐ.ಟಿ ವಲಯದಲ್ಲಿನ ನೇಮಕಾತಿಯ ಚೇತರಿಕೆಗೆ ಕೆಲ ಸಮಯ ಹಿಡಿಯಲಿದೆ
ಪವನ್ ಗೋಯಲ್ ಮುಖ್ಯ ವ್ಯವಹಾರ ಅಧಿಕಾರಿ ನೌಕರಿಡಾಟ್‌ಕಾಂ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT