ಖರೀದಿ ಬೆಂಬಲ ಸೂಚ್ಯಂಕ ಏರಿಕೆ

7
ಉತ್ತಮ ಗಳಿಕೆ

ಖರೀದಿ ಬೆಂಬಲ ಸೂಚ್ಯಂಕ ಏರಿಕೆ

Published:
Updated:

ಮುಂಬೈ: ಷೇರುಪೇಟೆಯಲ್ಲಿನ ಎರಡು ದಿನಗಳ ಕುಸಿತಕ್ಕೆ ಬುಧವಾರ ತಡೆ ಬಿದ್ದಿದ್ದು, ಖರೀದಿ ಬೆಂಬಲದ ಫಲವಾಗಿ ಸಂವೇದಿ ಸೂಚ್ಯಂಕವು ಉತ್ತಮ ಗಳಿಕೆ ಕಂಡಿತು.

ಅಮೆರಿಕ ಮತ್ತು ಚೀನಾ ನಡುವಣ ವಾಣಿಜ್ಯ ಸಮರ ಸಾಧ್ಯತೆ ಕಾರಣಕ್ಕೆ  ಕುಸಿತ ಕಂಡಿದ್ದ ಯುರೋಪ್‌ ಮತ್ತು ಏಷ್ಯಾದ ಮಾರುಕಟ್ಟೆಗಳಲ್ಲಿ ಚುರುಕಿನ ವಹಿವಾಟು ನಡೆಯಿತು. ಇದು ದೇಶಿ ಮಾರುಕಟ್ಟೆಯಲ್ಲಿಯೂ ಪ್ರತಿಫಲಿಸಿತು. ಜಾಗತಿಕ ವಾಣಿಜ್ಯ ವಹಿವಾಟಿಗೆ ಸಂಬಂಧಿಸಿದ ಉದ್ವಿಗ್ನತೆಯ ಹೊರತಾಗಿಯೂ ಮುಂಬೈ ಪೇಟೆಯಲ್ಲಿ ವಹಿವಾಟು ಸಕಾರಾತ್ಮಕವಾಗಿ ನಡೆಯಿತು.

ಲಾಭ ಬಾಚಿಕೊಂಡ ಸಂಸ್ಥೆಗಳ ಸಾಲಿನಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ ಮುಂಚೂಣಿಯಲ್ಲಿದ್ದು ಶೇ 2.44ರಷ್ಟು ಗಳಿಕೆ ಕಂಡಿತು. ಇಂಡಸ್‌ಇಂಡ್‌ ಬ್ಯಾಂಕ್‌, ವೇದಾಂತ, ಯೆಸ್‌ ಬ್ಯಾಂಕ್‌, ಕೋಟಕ್‌ ಬ್ಯಾಂಕ್‌, ಟಾಟಾ ಸ್ಟೀಲ್‌, ಎಚ್‌ಡಿಎಫ್‌ಸಿ ಬ್ಯಾಂಕ್‌ ಷೇರುಗಳು ಗಮನಾರ್ಹ ಏರಿಕೆ ದಾಖಲಿಸಿದವು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !