ಬೆಂಗಳೂರು: ಡೈನಿಂಗ್ ರೆಸ್ಟೋರೆಂಟ್ ಸರಣಿ ಕಂಪನಿ ಬಾರ್ಬೆಕ್ಯು ನೇಷನ್ ಹಾಸ್ಪಿಟ್ಯಾಲಿಟಿ ಲಿಮಿಟೆಡ್ (ಬಿಎನ್ಎಚ್ಎಲ್ ), ಪ್ರಾಥಮಿಕ ಮಾರುಕಟ್ಟೆಯಿಂದ ಬಂಡವಾಳ ಸಂಗ್ರಹಿಸಲು ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಪ್ರಕಟಿಸಿದೆ. ಈ ಕೊಡುಗೆ ಖರೀದಿಸಲು ಶುಕ್ರವಾರ (ಮಾರ್ಚ್ 26) ಕೊನೆಯ ದಿನವಾಗಿದೆ.
ಇದೇ 24ರಂದು ಬಿಡುಗಡೆಯಾಗಿದ್ದ ‘ಐಪಿಒ’ದ ಬೆಲೆ ಶ್ರೇಣಿಯನ್ನು ₹ 498 ರಿಂದ ₹ 500ವರೆಗೆ ನಿಗದಿಪಡಿಸಲಾಗಿದೆ. ಕನಿಷ್ಠ ಹೂಡಿಕೆ 30 ಷೇರುಗಳಾಗಿದ್ದು, ನಂತರ 30 ಷೇರುಗಳ ಗುಣಾಕಾರದಲ್ಲಿ ಇರಲಿದೆ. ₹ 453 ಕೋಟಿ ಮೊತ್ತದ ನೀಡಿಕೆ ಇದಾಗಿದೆ.
ಐಪಿಒ ಮೂಲಕ ಸಂಗ್ರಹವಾಗುವ ಮೊತ್ತವನ್ನು ಹೊಸ ರೆಸ್ಟೊರೆಂಟ್ಗಳನ್ನು ಆರಂಭಿಸಲು, ವಹಿವಾಟು ವಿಸ್ತರಿಸಲು, ಕಂಪನಿಯ ಸಾಲ ಮರುಪಾವತಿ ಹಾಗೂ ಇತರ ಕಾರ್ಪೊರೇಟ್ ಉದ್ದೇಶಗಳಿಗೆ ಬಳಸಿಕೊಳ್ಳಲು ಕಂಪನಿ ಉದ್ದೇಶಿಸಿದೆ.