ನವದೆಹಲಿ: ಇನ್ಫೊಸಿಸ್ ಸಹ ಸಂಸ್ಥಾಪಕರಲ್ಲಿ ಒಬ್ಬರಾಗಿರುವ ಎಸ್.ಡಿ.ಶಿಬುಲಾಲ್ ಅವರು ಕಂಪನಿಯ ₹ 100 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.
7.58 ಲಕ್ಷಕ್ಕಿಂತ ಹೆಚ್ಚು ಷೇರುಗಳನ್ನು ಶಿಬುಲಾಲ್ ಅವರು ಸರಾಸರಿ ₹ 1,317ಕ್ಕೆ ಖರೀದಿಸಿದ್ದಾರೆ. ಈ ಖರೀದಿಯಿಂದಾಗಿ ಶಿಬುಲಾಲ್ ಅವರು ಕಂಪನಿಯಲ್ಲಿ ಹೊಂದಿರುವ ಷೇರುಪಾಲು ಶೇಕಡ 0.07ಕ್ಕೆ ಏರಿಕೆ ಆಗಿದೆ ಎಂದು ಇನ್ಫೊಸಿಸ್ ಷೇರುಪೇಟೆಗೆ ತಿಳಿಸಿದೆ.
ಶಿಬುಲಾಲ್ ಅವರ ಪತ್ನಿ ಕುಮಾರಿ ಅವರು ಇದೇ ಸಂದರ್ಭದಲ್ಲಿ 7.58 ಲಕ್ಷಕ್ಕಿಂತ ಹೆಚ್ಚಿನ ಷೇರುಗಳನ್ನು ತಲಾ ₹ 1,317ರಂತೆ ಮಾರಾಟ ಮಾಡಿದ್ದಾರೆ. ಈ ವಹಿವಾಟಿನ ನಂತರ, ಕಂಪನಿಯಲ್ಲಿ ಕುಮಾರಿ ಅವರ ಷೇರುಪಾಲು ಶೇ 0.21ರಷ್ಟು ಇದ್ದಿದ್ದು ಶೇ 0.19ಕ್ಕೆ ಇಳಿಕೆ ಕಂಡಿದೆ.