ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂಡಿಕೆದಾರರಿಗೆ ನಷ್ಟದ ವರ್ಷ

ಸಂಪತ್ತಿನಲ್ಲಿ ಕರಗಿತು ₹ 7.25 ಲಕ್ಷ ಕೋಟಿ
Last Updated 31 ಡಿಸೆಂಬರ್ 2018, 18:52 IST
ಅಕ್ಷರ ಗಾತ್ರ

ನವದೆಹಲಿ: ಷೇರುಪೇಟೆಯ ಹೂಡಿಕೆದಾರರ ಪಾಲಿಗೆ 2018 ನಷ್ಟದ ವರ್ಷವಾಗಿದೆ.

ಒಂದು ವರ್ಷಾವಧಿಯಲ್ಲಿ ಮುಂಬೈ ಷೇರುಪೇಟೆಯಲ್ಲಿ ನೋಂದಾಯಿತ ಕಂಪನಿಗಳ ಮಾರುಕಟ್ಟೆ ಮೌಲ್ಯದಲ್ಲಿ ₹ 7.25 ಲಕ್ಷ ಕೋಟಿ ಸಂಪತ್ತು ಕರಗಿದ್ದು, ಒಟ್ಟಾರೆ ಮಾರುಕಟ್ಟೆ ಮೌಲ್ಯವು ₹ 144 ಲಕ್ಷ ಕೋಟಿಗೆ ಇಳಿಕೆಯಾಗಿದೆ.

ವರ್ಷದ ವಹಿವಾಟಿನಲ್ಲಿ ಮುಂಬೈ ಷೇರುಪೇಟೆ ಸೂಚ್ಯಂಕ 2,011.5ರಷ್ಟು (ಶೇ 5.90ರಷ್ಟು) ಏರಿಕೆಯಾಗಿದೆ.

ಆಗಸ್ಟ್‌ 29ರಂದು ಸಾರ್ವಕಾಲಿಕ ಗರಿಷ್ಠ ಮಟ್ಟವಾದ 38,989 ಅಂಶಗಳಿಗೆ ತಲುಪಿತ್ತು. ಇದಕ್ಕೆ ಹೋಲಿಸಿದರೆ ಸೋಮವಾರದ ವಹಿವಾಟಿನಲ್ಲಿ 36,068ಕ್ಕೆ ಅಂದರೆ 2,921 ಅಂಶಗಳಷ್ಟು ಇಳಿಕೆಯಾಗಿದೆ.

ಸೋಮವಾರ 8 ಅಂಶಗಳ ಅಲ್ಪ ಇಳಿಕೆಯೊಂದಿಗೆ 2018ರ ವಹಿವಾಟು ಅಂತ್ಯವಾಗಿದೆ.ಭಾರ್ತಿ ಏರ್‌ಟೆಲ್‌, ಆ್ಯಕ್ಸಿಸ್‌ ಬ್ಯಾಂಕ್‌, ಹೀರೊ ಮೋಟೊಕಾರ್ಪ್‌ ಮತ್ತು ಎನ್‌ಟಿಪಿಸಿ ನಷ್ಟ ಕಂಡಿವೆ.ನಿಫ್ಟಿ 8 ಅಂಶ ಹೆಚ್ಚಾಗಿ 10,862 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ಮೌಲ್ಯಯುತ ಕಂಪನಿ: ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ನ ಮಾರುಕಟ್ಟೆ ಮೌಲ್ಯ ₹7,10,584 ಕೋಟಿಗೆ ತಲುಪಿದ್ದು, ಅತ್ಯಂತ ಮೌಲ್ಯಯತ ಕಂಪನಿಯಾಗಿ ಹೊರಹೊಮ್ಮಿದೆ. ₹ 7,10,532 ಕೋಟಿಯೊಂದಿಗೆ ಟಿಸಿಎಸ್‌ ಎರಡನೇ ಸ್ಥಾನದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT