ಟಿಸಿಎಸ್, ಒಎನ್ಜಿಸಿ, ಆರ್ಐಎಲ್, ಕೋಲ್ ಇಂಡಿಯಾ, ಎಚ್ಡಿಎಫ್ಸಿ, ಸಿಐಎಲ್, ಐಸಿಐಸಿಐ ಬ್ಯಾಂಕ್ ಮತ್ತು ಇನ್ಫೊಸಿಸ್ ಷೇರು ಮೌಲ್ಯ ಏರಿಕೆ ಆಗಿದೆ.
ಇನ್ನೊಂದೆಡೆ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ) ಮತ್ತು ಐಟಿಸಿ ಮಾತ್ರ ಮಾರುಕಟ್ಟೆ ಮೌಲ್ಯವನ್ನು ಸಾಕಷ್ಟು ಕಳೆದುಕೊಂಡಿವೆ.
ಸಾಫ್ಟ್ವೇರ್ ಸೇವೆಗಳನ್ನು ರಫ್ತು ಮಾಡುವ ದೇಶದ ಅತಿದೊಡ್ಡ ಕಂಪೆನಿ ‘ಟಿಸಿಎಸ್’ ಮಾರುಕಟ್ಟೆ ಮೌಲ್ಯ ರೂ. 10,430 ಕೋಟಿಯಷ್ಟು ಏರಿಕೆ ಆಗಿದ್ದು, ಒಟ್ಟು ಮೌಲ್ಯ ರೂ. 4,91,435 ಕೋಟಿಗೆ ತಲುಪಿದೆ. ಡಿ. 12ರ ಅಂತ್ಯಕ್ಕೆ ಟಿಸಿಎಸ್ ರೂ. 24,043 ಕೋಟಿಗಳಷ್ಟು ಮೌಲ್ಯ ಕಳೆದುಕೊಂಡಿದ್ದರಿಂದ ಒಟ್ಟು ಮೌಲ್ಯ ರೂ. 4,81,004 ಕೋಟಿಗೆ ತಗ್ಗಿತ್ತು.
ಸರ್ಕಾರಿ ಸ್ವಾಮ್ಯದ ಒಎನ್ಜಿಸಿ ಅತಿ ಹೆಚ್ಚಿನ ಗಳಿಕೆ ಕಂಡುಕೊಂಡಿದೆ. ಇದರ ಮಾರುಕಟ್ಟೆ ಮೌಲ್ಯ ರೂ. 10,566 ಕೋಟಿಯಷ್ಟು ಹೆಚ್ಚಿದ್ದು, ಒಟ್ಟು ಮೌಲ್ಯ ರೂ. 2,98,843 ಕೋಟಿಗೆ ಏರಿಕೆ ಆಗಿದೆ.
ಡಿ.12ರ ವಾರಾಂತ್ಯಕ್ಕೆ ಒಟ್ಟಾರೆ ಒಎನ್ಜಿಸಿ ಮಾರುಕಟ್ಟೆ ಮೌಲ್ಯ ರೂ. 2,88,277 ಕೋಟಿಯಷ್ಟಿತ್ತು.