ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಣಮಟ್ಟದ ಸೇವೆ ಅಗತ್ಯ

Last Updated 27 ಸೆಪ್ಟೆಂಬರ್ 2016, 19:52 IST
ಅಕ್ಷರ ಗಾತ್ರ

ನವದೆಹಲಿ: ‘ಮೊಬೈಲ್‌ ಸೇವಾ ಕಂಪೆನಿಗಳ ನಡುವಣ ಬೆಲೆ ಸಮರ ಒಳ್ಳೆಯ ಬೆಳವಣಿಗೆಯಾಗಿದ್ದು,  ಸೇವಾ  ಸಂಸ್ಥೆಗಳು ಉತ್ತಮ ಗುಣಮಟ್ಟದ ಸೇವೆ ಒದಗಿಸುವತ್ತ ಗಮನ ಹರಿಸಬೇಕು...’

ರಿಲಯನ್ಸ್‌ ಕಂಪೆನಿಯ ಜಿಯೊ ಉಚಿತ ಕರೆ, ಅಗ್ಗದ ಡೇಟಾ ಸೇವೆ ಘೋಷಿಸಿದ ಬೆನ್ನಲ್ಲೇ  ಮೊಬೈಲ್‌ ಸೇವಾ ಸಂಸ್ಥೆಗಳ ಮಧ್ಯೆ ಏರ್ಪಟ್ಟಿರುವ ದರ ಸಮರದ ಬಗ್ಗೆ  ಗ್ರಾಹಕರು ವ್ಯಕ್ತಪಡಿಸಿರುವ  ಅಭಿಪ್ರಾಯ ಇದು. ಲೋಕಲ್‌ ಸರ್ಕಲ್ಸ್‌ ಎಂಬ ಖಾಸಗಿ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಶೇ 43ರಷ್ಟು ಗ್ರಾಹಕರು, ಬಹುತೇಕ ಟೆಲಿಕಾಂ ಕಂಪೆನಿಗಳ  ಡೇಟಾ ಸೇವೆ ಅತ್ಯಂತ ದುರ್ಬಲವಾಗಿದೆ ಎಂದು ತಿಳಿಸಿದ್ದಾರೆ.

ಶೇ 27ರಷ್ಟು ಗ್ರಾಹಕರು ಧ್ವನಿ ಸ್ಪಷ್ಟತೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ಕರೆ ಕಡಿತ (ಕಾಲ್‌ಡ್ರಾಪ್‌) ಸಮಸ್ಯೆ ನಿರ್ವಹಿಸುವಲ್ಲಿ  ಸೇವಾ ಸಂಸ್ಥೆಗಳಿಗೆ ಶೇ 53ರಷ್ಟು ಬಳಕೆದಾರರು ಸರಾಸರಿ ಅಂಕ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT