ನವದೆಹಲಿ/ಮುಂಬೈ(ಪಿಟಿಐ): ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಇಳಿಮುಖವಾಗಿದ್ದರಿಂದ ದೇಶದ ಪ್ರಮುಖ ಚಿನಿವಾರ ಪೇಟೆಗಳಲ್ಲಿಯೂ ಚಿನ್ನ ಸಂಗ್ರಹಕಾರರು ತಮ್ಮಲ್ಲಿದ್ದ ಸರಕು ಮಾರಲು ಮುಂದಾದರು. ಇದರಿಂದ ಬಂಗಾರದ ಧಾರಣೆ ನವದೆಹಲಿಯಲ್ಲಿ ರೂ400ರಷ್ಟು ಕುಸಿದು ತಿಂಗಳ ಕನಿಷ್ಠ ಮಟ್ಟಕ್ಕಿಳಿದಿದೆ. ಮುಂಬೈನಲ್ಲಿ ರೂ380ರಷ್ಟು ತಗ್ಗಿದೆ.
ಸಿದ್ಧ ಬೆಳ್ಳಿ ಮುಂಬೈನಲ್ಲಿ ರೂ590ರಷ್ಟು ಅಗ್ಗವಾಯಿತು. ನವದೆಹಲಿಯಲ್ಲಿ ಕೆ.ಜಿ.ಗೆ ರೂ550 ಕೆಳಕ್ಕಿಳಿಯಿತು. ನವದೆಹಲಿ ಧಾರಣೆ: ಸ್ಟ್ಯಾಂಡರ್ಡ್ ಚಿನ್ನ ರೂ26,90೦ಕ್ಕೂ, ಅಪರಂಜಿ ಚಿನ್ನ ರೂ27,10೦ಕ್ಕೂ ಇಳಿಯಿತು. ಕೆ.ಜಿ. ಬೆಳ್ಳಿ ರೂ37,85೦ರಂತೆ ಮಾರಾಟವಾಯಿತು.
ಮುಂಬೈ ಧಾರಣೆ: ೧೦ ಗ್ರಾಂ ಸ್ಟ್ಯಾಂಡರ್ಡ್ ಚಿನ್ನ ರೂ೨6,580ರಲ್ಲೂ, ಅಪರಂಜಿ ಚಿನ್ನ ರೂ೨6,725ರಲ್ಲೂ ವಹಿವಾಟು ನಡೆಸಿತು. ಬೆಳ್ಳಿ ಕೆ.ಜಿ.ಗೆ ರೂ38,335ರಂತೆ ಮಾರಾಟವಾಯಿತು.
ಲಂಡನ್ ವರದಿ: ಲಂಡನ್ ಪೇಟೆಯಲ್ಲಿ ಚಿನ್ನದ ಧಾರಣೆ ಶೇ 0.7ರಷ್ಟು ಇಳಿದು, ಔನ್ಸ್ಗೆ 1,203.22 ಡಾಲರ್ನಲ್ಲಿ ವಹಿವಾಟು ನಡೆಸಿತು.