ನವದೆಹಲಿ: ಡುಕಾಟಿ ಸಂಸ್ಥೆಯ ಭಾರತೀಯ ಮಾರುಕಟ್ಟೆಗೆ ಎರಡು ಹೊಸ ಬೈಕ್ಗಳನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಡುಕಾಟಿ ಮಲ್ಟಿಸ್ಟ್ರಾಡಾ 950 ಹಾಗೂ ಮಾನ್ಸ್ಟರ್ 797 ಬೈಕ್ ಬಿಡುಗಡೆಯಾಗಲಿದೆ.
ಇಟಲಿಯ ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆ ಡುಕಾಟಿ ಭಾರತದಲ್ಲಿ ಜೂನ್ 14ರಂದು ಎರಡು ಹೊಸ ಬೈಕ್ಗಳನ್ನು ಬಿಡುಗಡೆ ಮಾಡಲಿದೆ.
ಸಾಹಸ ಪ್ರಿಯರು ಹಾಗೂ ಬೈಕ್ ರೈಡಿಂಗ್ನಲ್ಲಿ ಹೆಚ್ಚು ಆಸಕ್ತಿ ಹೊಂದಿರುವವರಿಗೆ ಡುಕಾಟಿ ನೆಚ್ಚಿನ ಬೈಕ್ ಆಗಿದ್ದು ಭಾರತದಲ್ಲಿ ತನ್ನ ಮಾರುಕಟ್ಟೆ ವಿಸ್ತರಣೆ ಈ ವರ್ಷ ಒಟ್ಟು ಐದು ಮಾದರಿಯ ಬೈಕ್ಗಳ ಬಿಡುಗಡೆಗೆ ಸಂಸ್ಥೆ ಮುಂದಾಗಿದೆ.
ಡುಕಾಟಿ ಮಾನ್ಸ್ಟರ್ 797:
797 ಮಾನ್ಸ್ಟರ್ ಸರಣಿಯ ಪ್ರಾರಂಭಿಕ ಹಂತದ ಬೈಕ್ ಆಗಿದೆ. 75 ಎಚ್ಪಿ ಸಾಮರ್ಥ್ಯದ 803 ಸಿಸಿ ಎಲ್–ಟ್ವಿನ್ ಇಂಜಿನ್ ಹೊಂದಿದೆ.
ಎಕ್ಸ್–ಷೋರೂಂ ಬೆಲೆ: ₹7.82 ಲಕ್ಷ
ಡುಕಾಟಿ ಮಲ್ಟಿಸ್ಟ್ರಾಡಾ 950:
113 ಎಚ್ಪಿ ಸಾಮರ್ಥ್ಯದ 937 ಸಿಸಿ ಟ್ವಿನ್ ಸಿಲಿಂಡರ್ ಇಂಜಿನ್ ಹೊಂದಿದೆ.
ಎಕ್ಸ್–ಷೋರೂಂ ಬೆಲೆ: ₹11.53 ಲಕ್ಷ