ಬೆಂಗಳೂರು: ಈಗಾಗಲೇ ಬ್ರಿಯೊ, ಸಿಟಿ, ಅಕಾರ್ಡ್ ಮತ್ತು ಸಿಆರ್-ವಿ ಮಾದರಿಗಳನ್ನು ಭಾರತದ ರಸ್ತೆಗಿಳಿಸಿರುವ ಜಪಾನ್ ಕಾರು ಕಂಪೆನಿ `ಹೋಂಡಾ', ಮುಂದಿನ 3 ವರ್ಷದಲ್ಲಿ 5 ಹೊಸ ಕಾರು ಪರಿಚಯಿಸುವುದಾಗಿ ಹೇಳಿದೆ.
ರಾಜ್ಯದ ಮಾರುಕಟ್ಟೆಗೆ `ಅಮೇಜ್' ಡೀಸೆಲ್-ಪೆಟ್ರೋಲ್ ಕಾರು ಬಿಡುಗಡೆ ಮಾಡಿದ `ಹೋಂಡಾ ಕಾರ್ಸ್ ಇಂಡಿಯ ಲಿ.' ಮಾರಾಟ ವಿಭಾಗದ ಹಿರಿಯ ಉಪಾಧ್ಯಕ್ಷ ಜ್ಞಾನೇಶ್ವರ್ ಸೇನ್, ಪ್ರಸಕ್ತ ಹಣಕಾಸು ವರ್ಷದಲ್ಲಿ ಒಟ್ಟು 50 ಸಾವಿರ `ಅಮೇಜ್' ಕಾರು ಮಾರಾಟ ಮಾಡುವ ವಿಶ್ವಾಸವಿದೆ ಎಂದರು.
ಉತ್ತರ ಪ್ರದೇಶದ ಗ್ರೇಟರ್ ನೊಯಿಡಾ, ರಾಜಸ್ತಾನದ ಅಲ್ವಾರಾ ಜಿಲ್ಲೆ ಘಟಕದಲ್ಲಿ ಸದ್ಯ ತಿಂಗಳಿಗೆ 4ರಿಂದ 5 ಸಾವಿರ ಅಮೇಜ್ ಕಾರು ತಯಾರಿಸಬಹುದಾಗಿದೆ. ಹಾಗಾಗಿ ಮಾರಾಟ ಗುರಿಯನ್ನು ತಯಾರಿಕೆ ಸಾಮರ್ಥ್ಯಕ್ಕೆ ತಕ್ಕಂತೆಯೇ ಇಟ್ಟುಕೊಳ್ಳಲಾಗಿದೆ ಎಂದರು.ಕೇರಳ, ಆಂಧ್ರಪ್ರದೇಶ, ಪಂಜಾಬ್ನಲ್ಲಿ ಡೀಸೆಲ್ ಕಾರಿಗೆ ಭಾರಿ ಬೇಡಿಕೆ ಇದ್ದು, `ಅಮೇಜ್' ಡೀಸೆಲ್ ಮಾದರಿ ಇಲ್ಲಿ ಹೆಚ್ಚು ಮಾರಾಟವಾಗುವ ನಿರೀಕ್ಷೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.