ನವದೆಹಲಿ: ಹೋಂಡಾ ಕಾರ್ಸ್ ಇಂಡಿಯಾ ಕಂಪೆನಿಯು ಕಾಂಪ್ಯಾಕ್ಟ್ ಕ್ರಾಸ್ಓವರ್ ವಿಭಾಗದಲ್ಲಿ ಡಬ್ಲ್ಯುಆರ್–ವಿ ಕಾರನ್ನು ಬಿಡುಗಡೆ ಮಾಡಿದೆ. ಇದರ ಬೆಲೆ ₹7.75 ಲಕ್ಷದಿಂದ ₹9.99 ಲಕ್ಷದವರೆಗಿದೆ (ದೆಹಲಿ ಎಕ್ಸ್ ಷೋರೂಂ ಬೆಲೆ) ಎಂದು ಕಂಪೆನಿ ತಿಳಿಸಿದೆ.
ಪೆಟ್ರೋಲ್ ಎಂಜಿನ್ 1.2 ಲೀಟರ್ ಮತ್ತು ಡೀಸೆಲ್ ಎಂಜಿನ್ 1.5 ಲೀಟರ್ ಸಾಮರ್ಥ್ಯದ್ದಾಗಿವೆ. ಡ್ಯೂಯೆಲ್ ಏರ್ಬ್ಯಾಗ್, ಎಬಿಎಸ್, ಉಪಗ್ರಹ ಸಂಪರ್ಕ ಹೊಂದಿರುವ ನ್ಯಾವಿಗೇಷನ್ ಇದರಲ್ಲಿರುವ ಪ್ರಮುಖ ಸೌಲಭ್ಯಗಳಾಗಿವೆ.