ವಿಜಯಪುರ: ದಾಖಲೆಯಿಲ್ಲದ ₹ 19.74 ಲಕ್ಷ ನಗದು ವಶ

ಬುಧವಾರ, ಏಪ್ರಿಲ್ 24, 2019
23 °C

ವಿಜಯಪುರ: ದಾಖಲೆಯಿಲ್ಲದ ₹ 19.74 ಲಕ್ಷ ನಗದು ವಶ

Published:
Updated:

ವಿಜಯಪುರ: ಜಿಲ್ಲೆಯ ಗಡಿ ಭಾಗದ ವಿವಿಧ ಚೆಕ್‌ಪೋಸ್ಟ್‌ಗಳಲ್ಲಿ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ ₹ 19.74 ಲಕ್ಷ ನಗದನ್ನು ಸೋಮವಾರ ವಶಪಡಿಸಿಕೊಳ್ಳಲಾಗಿದೆ.

ತಿಕೋಟಾ ತಾಲ್ಲೂಕಿನ ಕನಮಡಿ ಚೆಕ್‌ಪೋಸ್ಟ್‌ನಲ್ಲಿ ಅಥಣಿ ತಾಲ್ಲೂಕಿನ ಕೊಟ್ಟಲಗಿಯ ಸಿದರಾಯ ಈರಪ್ಪ ಯಲ್ಲಡಗಿ ಎಂಬುವರ ಇಂಡಿಕಾ ಕಾರನ್ನು ತಪಾಸಣೆಗೊಳಪಡಿಸಿದ ಸಂದರ್ಭ, ₹ 16.65 ಲಕ್ಷ ದಾಖಲೆಗಳಿಲ್ಲದ ನಗದು ಸಿಕ್ಕಿದೆ.

ಇದೇ ಚೆಕ್‌ಪೋಸ್ಟ್‌ನಲ್ಲಿ ಬಿಜ್ಜರಗಿಯ ಅಶೋಕ ಮಲ್ಲಪ್ಪ ಅಜೂರ ಅವರ ಬಳಿ ₹ 1.59 ಲಕ್ಷ ದಾಖಲೆಗಳಿಲ್ಲದ ನಗದು ಸಿಕ್ಕಿದೆ. ಹಣವನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಕೋಟಾ ಪೊಲೀಸರು ತಿಳಿಸಿದರು.

ಯಾವುದೇ ದಾಖಲೆ ಇಲ್ಲದೆ ವಾಹನದಲ್ಲಿ ಸಾಗಿಸುತ್ತಿದ್ದ ₹ 1.5 ಲಕ್ಷ ನಗದನ್ನು ಚುನಾವಣಾ ಅಧಿಕಾರಿಗಳು ಹಾಗೂ ಚಡಚಣ ಪೊಲೀಸರು ರಾಜ್ಯದ ಗಡಿಯಲ್ಲಿನ ಶಿರಾಡೋಣ ಚೆಕ್‌ಪೋಸ್ಟ್‌ನಲ್ಲಿ ಭಾನುವಾರ ರಾತ್ರಿ ವಶಕ್ಕೆ ಪಡೆದಿದ್ದಾರೆ.

ಪಂಢರಪುರದಿಂದ ಚಡಚಣಕ್ಕೆ ಬರುತ್ತಿದ್ದ ವಾಹನ ತಪಾಸಿಸಿದಾಗ, ಮಹಾರಾಷ್ಟ್ರದ ಮಾಡ ತಾಲ್ಲೂಕಿನ ಪರೀತಿವಾಡ ಗ್ರಾಮದ ಮಹಾದೇವ ಅಭಿಮಾನ ಮೋರೆ ಎಂಬುವವರ ಬಳಿಯಿದ್ದ ₹ 1.5 ಲಕ್ಷ ನಗದನ್ನು ವಶಕ್ಕೆ ಪಡೆಯಲಾಗಿದೆ ಎಂದು ಚಡಚಣ ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !