ಸಕ್ಕರೆ ದಾಸ್ತಾನು ಮಿತಿ ಹೇರಿಕೆ: ಕೇಂದ್ರ ಸರ್ಕಾರದ ಸಮರ್ಥನೆ

7

ಸಕ್ಕರೆ ದಾಸ್ತಾನು ಮಿತಿ ಹೇರಿಕೆ: ಕೇಂದ್ರ ಸರ್ಕಾರದ ಸಮರ್ಥನೆ

Published:
Updated:

ಬೆಂಗಳೂರು: ಸಕ್ಕರೆ ಕಾರ್ಖಾನೆಗಳಿಗೆ ಸಕ್ಕರೆ ದಾಸ್ತಾನಿಗೆ ಮಿತಿ ಹೇರುವುದು ಮತ್ತು ಸಕ್ಕರೆ ಮಾರಾಟದ ಮೇಲೆತ್ತಿ ಕನಿಷ್ಠ ಬೆಲೆ ನಿಗದಿ ಮಾಡುವ ನೀತಿ ನಿರ್ಧಾರವನ್ನು ಕೇಂದ್ರ ಸರ್ಕಾರ ಹೈಕೋರ್ಟ್‌ನಲ್ಲಿ ಬಲವಾಗಿ ಸಮರ್ಥಿಸಿಕೊಂಡಿದೆ.

ಸಕ್ಕರೆ ಕಾರ್ಖಾನೆಗಳು ಸಲ್ಲಿಸಿರುವ ಅರ್ಜಿಗಳನ್ನು ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಪ್ರಭುಲಿಂಗ ಕೆ. ನಾವದಗಿ ಅವರು, ‘ಮಿತಿ ಹೇರಿಕೆಯ ಮಹತ್ವದ ನೀತಿ ನಿರ್ಧಾರ ಕೈಗೊಳ್ಳದೇ ಹೋಗಿದ್ದರೆ ಸಕ್ಕರೆ ಬೆಲೆ ಕೆಜಿಗೆ ₹ 20ರಷ್ಟು ಇಳಿಯುತ್ತಿತ್ತು’ ಎಂದರು.

ಎನ್‌ಎಸ್‌ಎಲ್ ಶುಗರ್ಸ್‌ ಸಲ್ಲಿಸಿರುವ ಅರ್ಜಿ ಕುರಿತಂತೆ ಕೇಂದ್ರ ಸರಕಾರದ ಪರ ನಾವದಗಿ ವಾದ ಮಂಡಿಸಿದರು.

‘2018ರ ಅಕ್ಟೋಬರ್‌ನಿಂದ 2018ನೇ ಸಾಲಿನ ಸಕ್ಕರೆ ಹಂಗಾಮು ಇರುತ್ತದೆ, ಅಲ್ಲಿಯವರೆಗೆ ಹೊಸ ಆದೇಶ ಜಾರಿಯಲ್ಲಿರುತ್ತದೆ’ ಎಂದು ತಿಳಿಸಿದರು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !