ಮಕ್ಕಳ ಸುರಕ್ಷತೆಗೆ ನಿಯಮಾವಳಿ ರಚನೆ

7

ಮಕ್ಕಳ ಸುರಕ್ಷತೆಗೆ ನಿಯಮಾವಳಿ ರಚನೆ

Published:
Updated:

ನವದೆಹಲಿ: ಮಕ್ಕಳ ವಸತಿ ನಿಲಯಗಳಲ್ಲಿ ಸುರಕ್ಷತಾ ಕ್ರಮಗಳ ಜೊತೆಗೆ ಕನಿಷ್ಠ ಸೌಲಭ್ಯಗಳನ್ನು ಅನುಷ್ಠಾನಗೊಳಿಸಲು ಕುರಿತು ಕೇಂದ್ರ ಸರ್ಕಾರ ಸದ್ಯದಲ್ಲಿಯೇ ಜೆಜೆ (ಬಾಲನ್ಯಾಯ ಕಾಯ್ದೆ) ಅಡಿಯಲ್ಲಿ ಕಟ್ಟುನಿಟ್ಟಾದ ನಿಯಮಾವಳಿಗಳನ್ನು ಜಾರಿಗೆ ತರಲಿದೆ. 

2015 ರ ಬಾಲನ್ಯಾಯ ಕಾಯ್ದೆಯಡಿಯಲ್ಲಿ ಈ ನಿಯಮಾವಳಿಗಳನ್ನು ರಚಿಸಲಾಗುವುದು. ಶೈಕ್ಷಣಿಕ ಸಂಸ್ಥೆಗಳು, ಮಕ್ಕಳ ಆರೈಕೆ ಕೇಂದ್ರಗಳು, ಡೇ–ಕೇರ್‌ ಕೇಂದ್ರಗಳು, ವಸತಿ ಶಾಲೆಗಳಿಗೆ ಈ ನಿಯಾಮವಳಿ ಅನ್ವಯಿಸಲಿದೆ. 

ಪೋಷಕರು ಮತ್ತು ಇತರ ಪಾಲುದಾರರ ಮನವಿ ಅನುಸಾರ ಮಹಿಳಾ ಮತ್ತು ಮಕ್ಕಳ ಇಲಾಖೆ ಸುರಕ್ಷತಾ ಕ್ರಮಗಳ ನಿಯಮಾವಳಿಗಳನ್ನು ರೂಪಿಸುವ ಜವಾಬ್ದಾರಿಯನ್ನು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ(ಎನ್‌ಸಿಪಿಸಿಆರ್‌) ವಹಿಸಿದೆ.

‘ಶಾಲೆಗಳು, ಶಾಲೆಗಳು, ಮಕ್ಕಳ ಆರೈಕೆ ಕೇಂದ್ರಗಳು ಮತ್ತು ಡೇ–ಕೇರ್‌ ಕೇಂದ್ರಗಳಲ್ಲಿ ಮಕ್ಕಳು ದೌರ್ಜನ್ಯಕ್ಕೊಳಗಾಗುವ ಸಂಭವವಿರುತ್ತದೆ. ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಈ ನಿಯಮಾವಳಿ ರಚಿಸಲು ನಿರ್ಧರಿಸಲಾಗಿದ್ದು, ಅಧಿಕಾರಿಗಳ ಪರಿಶೀಲನೆಗೆ ಅಗತ್ಯವಾಗುವಂತೆ ಈ ನಿಯಮಾವಳಿಗಳನ್ನು ರೂಪಿಸಲಾಗಿದೆ. ಇದರ ಸಾಕಾರದ ಹೊಣೆಯನ್ನು ಎನ್‌ಸಿಪಿಸಿಆರ್‌ಗೆ ವಹಿಸಲಾಗಿದೆ’ ಎಂದು ಸಚಿವೆ ಮೇನಕಾ ಗಾಂಧಿ ತಿಳಿಸಿದ್ದಾರೆ.

ಈ ನಿಯಮಾವಳಿಗಳನ್ನು ಮಾನವ ಸಂಪನ್ಮೂಲ ಸಚಿವಾಲಯದ ಜೊತೆಗೆ ವಿನಿಮಯ ಮಾಡಿಕೊಳ್ಳಲಾಗಿದೆ. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !