ಕ್ರೀಡಾಕೂಟದಲ್ಲಿ ಅವ್ಯವಸ್ಥೆ; ಮಕ್ಕಳು ವಾಪಸ್

7

ಕ್ರೀಡಾಕೂಟದಲ್ಲಿ ಅವ್ಯವಸ್ಥೆ; ಮಕ್ಕಳು ವಾಪಸ್

Published:
Updated:
Deccan Herald

ಶಿಡ್ಲಘಟ್ಟ : ನಗರದ ನೆಹರೂ ಕ್ರೀಡಾಂಗಣದಲ್ಲಿ ಮೂರು ದಿನಗಳಿಂದ ನಡೆಯುತ್ತಿರುವ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಅವ್ಯವಸ್ಥೆ ಹೆಚ್ಚಿದ್ದು ಇದರಿಂದ ಬೇಸತ್ತು ಕೆಲವು ಗ್ರಾಮಗಳ ಸರ್ಕಾರಿ ಶಾಲೆಯ ಮಕ್ಕಳು ವಾಪಸಾದರು.

ಬೆಳಿಗ್ಗೆ 9.30 ಕ್ಕೆ ಕ್ರೀಡಾಂಗಣಕ್ಕೆ ಶಿಕ್ಷಕರೊಂದಿಗೆ ಬಂಧ ವಿದ್ಯಾರ್ಥಿಗಳಿಗೆ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಒದಗಿಸಿರಲಿಲ್ಲ. ಕ್ರೀಡಾ ಶಿಕ್ಷಕರು ಬಂದಿರಲಿಲ್ಲ. ಹನ್ನೆರಡು ಗಂಟೆಯವರೆಗೂ ಕಾಯುತ್ತಿದ್ದ ವರದನಾಯಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಬೇಸರದಿಂದ ಹಿಂದಿರುಗಿದರು.

‘ಮೂರು ದಿನಗಳಿಂದ ಮಕ್ಕಳಿಗೆ ಕ್ರೀಡಾಕೂಟ ನಡೆಸಲಾಗುತ್ತಿದೆ. ಇಲ್ಲಿ ಬಹಳ ಅವ್ಯವಸ್ಥೆಗಳಿವೆ. ಮಧ್ಯಾಹ್ನದ ನಂತರ ಕ್ರೀಡೆಗಳನ್ನು ಪ್ರಾರಂಭಿಸುವರು. ನಾವು ವರದನಾಯಕನಹಳ್ಳಿಯಿಂದ ಮಕ್ಕಳನ್ನು ಕರೆದುಕೊಂಡು ಬಂದಿದ್ದೆವು. ಬೆಳಿಗ್ಗೆ 9.30 ಕ್ಕೆ ಬಂದಿದ್ದು, 11 ಗಂಟೆಯಾದರೂ  ಕ್ರೀಡಾ ಶಿಕ್ಷಕರು ಯಾರೂ ಬಂದಿಲ್ಲ. ಬಿಸಿಲಲ್ಲಿ ಮಕ್ಕಳು ಒಣಗುತ್ತಿದ್ದಾರೆ. ನಮ್ಮ ಶಾಲೆಯಲ್ಲಿ ಮಕ್ಕಳ ಉಚಿತ ಆರೋಗ್ಯ ತಪಾಸಣೆಗಾಗಿ ವೈದ್ಯರು ಬಂದಿದ್ದಾರೆ. ಇಲ್ಲಿನ ಅವ್ಯವಸ್ಥೆಯಲ್ಲಿ ಕಾಯುವುದರಿಂದ ಬೇಸತ್ತು ವಾಪಸ್‌ ಹೊರಟಿದ್ದೇವೆ’ ಎಂದು ಶಿಕ್ಷಕ ಎಂ.ರಾಮಕೃಷ್ಣ ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !