ಪ್ರಾಕೃತ ವಿ.ವಿ ಸ್ಥಾಪನೆಗೆ ಕಂಬಾರ ಆಗ್ರಹ

7
ಜಿತೇಂದ್ರ ಕುಮಾರ್ ಅವರಿಗೆ ‘ಚಾವುಂಡರಾಯ ಪ್ರಶಸ್ತಿ’ ಪ್ರದಾನ

ಪ್ರಾಕೃತ ವಿ.ವಿ ಸ್ಥಾಪನೆಗೆ ಕಂಬಾರ ಆಗ್ರಹ

Published:
Updated:
Deccan Herald

ಬೆಂಗಳೂರು: ‘ಜೈನ ಧರ್ಮದ ಬಹುತೇಕ ಗ್ರಂಥಗಳು ರಚನೆಗೊಂಡ ಪ್ರಾಕೃತ ಭಾಷೆ ಅತ್ಯಂತ ಪ್ರಾಚೀನವಾದುದು. ಆ ಭಾಷೆಯ ಅಧ್ಯಯನಕ್ಕಾಗಿ ವಿಶ್ವವಿದ್ಯಾಲಯವೊಂದನ್ನು ಸ್ಥಾಪನೆ ಮಾಡಲೇಬೇಕು’ ಎಂದು ಸಾಹಿತಿ ಚಂದ್ರಶೇಖರ ಕಂಬಾರ ಒತ್ತಾಯಿಸಿದರು.

ನಗರದಲ್ಲಿ ಮಂಗಳವಾರ ಕನ್ನಡ ಸಾಹಿತ್ಯ‌ ಪರಿಷತ್ತು ಆಯೋಜಿಸಿದ್ದ ಸಮಾರಂಭದಲ್ಲಿ ಎಸ್‌.ಜಿತೇಂದ್ರ ಕುಮಾರ್ ಅವರಿಗೆ ‘ಚಾವುಂಡರಾಯ ಪ್ರಶಸ್ತಿ’ ಪ್ರದಾನ ಮಾಡಿ ಅವರು ಮಾತನಾಡಿದರು. 

‘ಸಾಹಿತ್ಯ ಪರಿಚಾರಕರಾಗಿ, ಸಮಾಜ ಸೇವಕರಾಗಿ ಅನನ್ಯ ಸೇವೆ ಸಲ್ಲಿಸಿದ ಜಿತೇಂದ್ರ ಕುಮಾರ್‌ ಅವರಿಗೆ ಪ್ರಶಸ್ತಿ ಸಂದಿರುವುದು
ಸಂತಸದ ವಿಷಯ. ಕರ್ನಾಟಕ ಜೈನ ಭವನ, ಮೋತಿಖಾನೆ ತಿಮ್ಮಪ್ಪಯ್ಯ ಜೈನ ವಿದ್ಯಾರ್ಥಿ ನಿಲಯ ಸ್ಥಾಪಿಸಿದ ಕೀರ್ತಿ ಇವರದ್ದು’
ಎಂದು ಹಿರಿಯ ಪತ್ರಕರ್ತ ಪದ್ಮರಾಜ ದಂಡಾವತಿ ಹೇಳಿದರು.

ಪ್ರಶಸ್ತಿ ಸ್ವೀಕರಿಸಿ‌ ಮಾತನಾಡಿದ ಎಸ್‌.ಜಿತೇಂದ್ರ ಕುಮಾರ್, ‘ಕಸಾಪ ಅಧ್ಯಕ್ಷ ಮನು ಬಳಿಗಾರ ಅವರು, ಪ್ರಶಸ್ತಿಯ ದತ್ತಿ ಮೊತ್ತವನ್ನು
₹4 ಲಕ್ಷದಿಂದ ₹6 ಲಕ್ಷಕ್ಕೆ ಹೆಚ್ಚಿಸಬೇಕೆಂದು ಚಾರುಕೀರ್ತಿ ಭಟ್ಟಾಚಾರಕ ಸ್ವಾಮೀಜಿ ಅವರನ್ನು ಕೋರಿದ್ದರು. ₹2 ಲಕ್ಷ ಅನುದಾನ ನೀಡಲು ಸ್ವಾಮೀಜಿ ಅವರನ್ನು ಕೇಳಿಕೊಂಡಿದ್ದೆ. ಶೀಘ್ರದಲ್ಲಿಯೇ ಹಣ ಬರುವ ಭರವಸೆ ಇದೆ’ ಎಂದು ಪ್ರಕಟಿಸಿದರು.

‘ದತ್ತಿಯ ಮೊತ್ತದಿಂದ ವಾರ್ಷಿಕ ಬಡ್ಡಿ ₹48,000 ಬರಲಿದೆ. ನನಗೆ ದೊರೆತ ಪ್ರಶಸ್ತಿಯ ಮೊತ್ತ ₹30,000 ಸೇರಿದಂತೆ ₹1 ಲಕ್ಷ ಮೊತ್ತವನ್ನು ಮೂಲ ದತ್ತಿನಿಧಿಗೆ ನೀಡಲು ನಿರ್ಧರಿಸಿರುವೆ. ಮುಂದಿನ‌ ಸಾಲಿನಿಂದ ದತ್ತಿ ಪ್ರಶಸ್ತಿಯ ಮೊತ್ತ ₹50,000ಕ್ಕೆ ಏರಲಿದೆ’ ಎಂದರು. ₹1 ಲಕ್ಷ ಮೊತ್ತದ ಚೆಕ್‌ಅನ್ನು ಮನು ಬಳಿಗಾರ ಅವರಿಗೆ ಹಸ್ತಾಂತರಿಸಿದರು. 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !