ಅರೆಕಾಲಿಕ ಕೆಲಸ ನೀಡುವುದಾಗಿ ವಂಚನೆ: ಎಂಬಿಎ ಪದವೀಧರ ಸೆರೆ

7

ಅರೆಕಾಲಿಕ ಕೆಲಸ ನೀಡುವುದಾಗಿ ವಂಚನೆ: ಎಂಬಿಎ ಪದವೀಧರ ಸೆರೆ

Published:
Updated:

ಬೆಂಗಳೂರು: ‘ಮನೆಯಿಂದಲೇ ಕೆಲಸ ಮಾಡಿ ಕೈ ತುಂಬ ಹಣ ಗಳಿಸಿ’ ಎಂದು ಜಾಹೀರಾತು ನೀಡಿ, ನೋಂದಣಿ ಶುಲ್ಕದ ಹೆಸರಿನಲ್ಲಿ ಹಣ ಸಂಗ್ರಹಿಸಿ ವಂಚಿಸುತ್ತಿದ್ದ ಆರೋಪದಡಿ ರೋಹಿತ್‌ (26) ಎಂಬಾತನನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ. 

ಕೋಣನಕುಂಟೆ ನಿವಾಸಿಯಾದ ರೋಹಿತ್, ಎಂಬಿಎ ಪದವೀಧರ. 100ಕ್ಕೂ ಹೆಚ್ಚು ಜನರಿಗೆ ಆತ ವಂಚಿಸಿದ್ದಾನೆ ಎಂಬುದು ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.

ಕೆಲವು ತಿಂಗಳ ಹಿಂದಷ್ಟೇ ‘ಜಾಬ್ ಫಾರ್ ಶ್ಯೂರ್‌’ ಹೆಸರಿನಲ್ಲಿ ಸಂಸ್ಥೆ ಆರಂಭಿಸಿದ್ದ ಆರೋಪಿ, ‘ಅರೆಕಾಲಿಕ ಕೆಲಸ ಮಾಡುವವರು ಬೇಕಾಗಿದ್ದಾರೆ’ ಎಂದು ಜಾಹೀರಾತು ನೀಡಿದ್ದ. ಅದನ್ನು ನೋಡಿದ್ದ ನೂರಾರು ಮಂದಿ, ಆತನನ್ನು ಸಂಪರ್ಕಿಸಿದ್ದರು. ‘ಬರವಣಿಗೆ ಕೆಲಸ ಇರುತ್ತದೆ. ಪುಟದ ಲೆಕ್ಕದಲ್ಲಿ ಹಣ ನೀಡಲಾಗುವುದು. ಆರಂಭದಲ್ಲಿ ₹4,001 ನೋಂದಣಿ ಶುಲ್ಕ ಭರಿಸಬೇಕು’ ಎಂದು ಆತ ಹೇಳಿದ್ದ.

ಅದನ್ನು ನಂಬಿದ್ದ ಜನ, ಶುಲ್ಕ ಪಾವತಿ ಮಾಡಿದ್ದರು. ಆರೋಪಿ ಹಲವರಿಗೆ ಸೂಕ್ತ ಕೆಲಸ ಕೊಟ್ಟಿರಲಿಲ್ಲ. ಕೆಲವರಿಗಷ್ಟೇ ದಿನಕ್ಕೆ ₹50 ರೂಪಾಯಿ ಪಾವತಿ ಮಾಡುತ್ತಿದ್ದ. ಆತನ ವಂಚನೆ ಅರಿತ ಮಹಿಳೆಯೊಬ್ಬರು ಆಗಸ್ಟ್‌ 2ರಂದು ಠಾಣೆಗೆ ದೂರು ನೀಡಿದ್ದರು ಎಂದು ಪೊಲೀಸರು ವಿವರಿಸಿದರು.

ಕಮಿಷನ್‌ ಆಸೆ ತೋರಿಸಿದ್ದ: ‘ಆರಂಭದಲ್ಲಿ ನೋಂದಣಿ ಶುಲ್ಕ ಪಾವತಿಸಿದ್ದವರಿಗೆ ಆರೋಪಿ, ಕೆಲಸ ಕೊಟ್ಟಿದ್ದ. ಮತ್ತಷ್ಟು ಸದಸ್ಯರನ್ನು ಕೆಲಸಕ್ಕೆ ಕರೆತಂದರೆ ₹1000 ಕಮಿಷನ್‌ ನೀಡುವುದಾಗಿ ಅವರೆಲ್ಲರಿಗೂ ಹೇಳಿದ್ದ. ಅದರ ಆಸೆಗಾಗಿ ಹಲವರು, ಸ್ನೇಹಿತರು ಹಾಗೂ ಪರಿಚಯಸ್ಥರನ್ನೂ ಕರೆತಂದಿದ್ದರು’ ಎಂದು ಪೊಲೀಸರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !