₹ 10ರ ಆಸೆ ತೋರಿಸಿ ₹ 50 ಸಾವಿರ ಕದ್ದರು!

7

₹ 10ರ ಆಸೆ ತೋರಿಸಿ ₹ 50 ಸಾವಿರ ಕದ್ದರು!

Published:
Updated:

ಬೆಂಗಳೂರು: ರಸ್ತೆ ಮೇಲೆ ₹ 10ರ ನೋಟು ಎಸೆದು ಗಾರೆ ಮೇಸ್ತ್ರಿಯೊಬ್ಬರ ಗಮನ ಬೇರೆಡೆ ಸೆಳೆದ ದುಷ್ಕರ್ಮಿಗಳು, ಬೈಕ್‌ನಲ್ಲಿದ್ದ ₹ 50 ಸಾವಿರ ದೋಚಿ ‍ಪರಾರಿಯಾಗಿದ್ದಾರೆ.

ಎಚ್‌ಎಸ್‌ಆರ್ ಲೇಔಟ್ 5ನೇ ಮುಖ್ಯರಸ್ತೆಯಲ್ಲಿ ಸೋಮವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಈ ಕೃತ್ಯ ನಡೆದಿದ್ದು, ಹಣ ಕಳೆದುಕೊಂಡ ಮಲ್ಲಿಕಾರ್ಜುನ್ ಠಾಣೆಗೆ ದೂರು ಕೊಟ್ಟಿದ್ದಾರೆ.

‘ಕಾರ್ಮಿಕರಿಗೆ ಕೂಲಿ ಕೊಡಲು ಕೆನರಾ ಬ್ಯಾಂಕ್‌ನಲ್ಲಿ ಹಣ ಡ್ರಾ ಮಾಡಿದ್ದೆ. ‘₹ 2 ಸಾವಿರದ ನೋಟುಗಳು ಖಾಲಿಯಾಗಿವೆ’ ಎಂದು ಬ್ಯಾಂಕ್‌ನವರು ₹ 100ರ ನೋಟುಗಳನ್ನೇ ಕೊಟ್ಟಿದ್ದರು. ಹಣವನ್ನು ಬ್ಯಾಗ್‌ನಲ್ಲಿ ಇಟ್ಟುಕೊಂಡು ಬೈಕ್‌ನಲ್ಲಿ ಸ್ವಲ್ಪ ದೂರ ಹೋಗುತ್ತಿದ್ದಂತೆಯೇ ‘ಸಾರ್.. ನಿಮ್ಮ ಹಣ ಬಿದ್ದಿದೆ’ ಎಂದು ಯಾರೋ ಒಬ್ಬ ಕೂಗಿ ಹೇಳಿದ’ ಎಂದು ಮಲ್ಲಿಕಾರ್ಜುನ್ ದೂರಿನಲ್ಲಿ ವಿವರಿಸಿದ್ದಾರೆ.

‘ಆ ವ್ಯಕ್ತಿ ರಸ್ತೆಯಲ್ಲಿ ಬಿದ್ದಿದ್ದ ₹ 10ರ ನೋಟನ್ನು ಎತ್ತಿ ತೋರಿಸುತ್ತಿದ್ದ. ನಾನು ಅದನ್ನು ಪಡೆಯಲು ಬೈಕ್ ನಿಲ್ಲಿಸಿ ಆತನ ಹತ್ತಿರ ನಡೆದು ಹೋಗುತ್ತಿದ್ದೆ. ಈ ವೇಳೆ ಬೈಕ್‌ನಲ್ಲಿ ಹಣದ ಬ್ಯಾಗ್ ಇಟ್ಟು ಬಂದಿರುವುದು ನೆನಪಾಯಿತು. ತಕ್ಷಣ ವಾಪಸ್ ಬಂದೆ. ಅಷ್ಟರೊಳಗೆ ಬ್ಯಾಗ್ ಕಳವಾಗಿತ್ತು. ನೋಟು ಹಿಡಿದು ನಿಂತಿದ್ದ ವ್ಯಕ್ತಿಯೂ ಕಾಣೆಯಾಗಿದ್ದ’ ಎಂದು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 2

  Amused
 • 1

  Sad
 • 1

  Frustrated
 • 1

  Angry

Comments:

0 comments

Write the first review for this !