ವಿನಾಶದ ಅಂಚಿಗೆ ಚಿಕ್ಕಬಸ್ತಿ ಕೆರೆ

7

ವಿನಾಶದ ಅಂಚಿಗೆ ಚಿಕ್ಕಬಸ್ತಿ ಕೆರೆ

Published:
Updated:
ವಿನಾಶದ ಅಂಚಿನಲ್ಲಿರುವ ಚಿಕ್ಕಬಸ್ತಿ ಕೆರೆ ಚಿತ್ರ

ಬೆಂಗಳೂರು: ಸರ್.ಎಂ.ವಿಶ್ವೇಶ್ವರಯ್ಯ ಬಡಾವಣೆಯ 4ನೇ ಬ್ಲಾಕ್‍ನಲ್ಲಿರುವ ಚಿಕ್ಕಬಸ್ತಿ ಕೆರೆ ಸಂಪೂರ್ಣ ಮಲಿನಗೊಂಡಿದೆ. ಶುದ್ಧವಾಗಿದ್ದಾಗ ಇಲ್ಲಿನ ನೀರನ್ನು ರಾಮಸಂದ್ರ, ಚಿಕ್ಕಬಸ್ತಿ, ಉಳ್ಳಾಲು ಉಪನಗರ, ಉಳ್ಳಾಲು, ಮಾರುತಿನಗರ ಸುತ್ತಮುತ್ತಲಿನ ಗ್ರಾಮಗಳ ಜನರು ಬಳಸುತ್ತಿದ್ದರು. ಆದರೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ವತಿಯಿಂದ ನಿರ್ಮಾಣ ಮಾಡಲಾದ ಬಡಾವಣೆಯಿಂದಾಗಿ ಚಿಕ್ಕಬಸ್ತಿ ಕೆರೆ ಸಂಪೂರ್ಣ ಕಲುಷಿತಗೊಂಡಿದೆ.

ಜೊಂಡು ಹುಲ್ಲು, ಗಿಡಗಂಟೆಗಳು ಬೆಳೆದು ವಿಷಕಾರಿ ಕ್ರಿಮಿಕೀಟಗಳ ತಂಗುದಾಣವಾಗಿದೆ. ಕೆರೆಯ ಅಂಗಳ ಒತ್ತುವರಿಯಾಗಿದೆ, ನೀರುಗಾಲುವೆ ಮುಚ್ಚಿಹೋಗಿದೆ. ಕೆರೆಗೆ ಶೌಚಾಲಯ ನೀರನ್ನು ನೇರವಾಗಿ ಹರಿಯಬಿಡಲಾಗುತ್ತಿದೆ. ಕೆರೆಯ ಅಂಗಳದಲ್ಲಿ ಕಟ್ಟಡದ ಘನತ್ಯಾಜ್ಯ, ಕಸವನ್ನು ತಂದು ಸುರಿಯಲಾಗುತ್ತಿದೆ. ನಾಮಫಲಕವೂ ಮರೆಯಾಗುತ್ತಿದೆ. 

ಬೆಂಗಳೂರು ಜಲಮಂಡಳಿ ಹಾಗೂ ಬಿಡಿಎ ಅಧಿಕಾರಿಗಳು ನಿರ್ಲಕ್ಷ ಮನೋಭಾವ ಮತ್ತು ಬೇಜವ್ದಾರಿತನ ತೋರುತ್ತಿರುವುದರಿಂದ ಕೆರೆ ವ್ಯಾಪ್ತಿ ಪ್ರದೇಶವು ಕೆಲವೇ ದಿನಗಳಲ್ಲಿ ಕಣ್ಮರೆಯಾಗುವುದರಲ್ಲಿ ಸಂದೇಹವಿಲ್ಲ ಎಂದು ಚಂದ್ರಪ್ಪ ಹೇಳಿದರು.

ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಎಸ್‍ಟಿಪಿ ಯೋಜನೆಗೆ ನೀಲನಕ್ಷೆ ತಯಾರಾಗಿದೆ ಎಂದು ಹೇಳಿ ಹಲವು ವರ್ಷಗಳು ಕಳೆದಿವೆ. ಆದರೂ ಇದುವರೆಗೂ ಎಸ್‍ಟಿಪಿ ಕಾಮಗಾರಿ ಪ್ರಾರಂಭವಾಗಿಲ್ಲ. ಹೀಗಾಗಿ ಒಳಚರಂಡಿ ನೀರು ಕೆರೆಗೆ ಸೇರುತ್ತಿದೆ ಎಂದು ಹೆಸರನ್ನು ಹೇಳಲಿಚ್ಚಿಸದ ಬೆಂಗಳೂರು ಜಲಮಂಡಳಿ ಹಿರಿಯ ಅಧಿಕಾರಿ ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !