ಭಾನುವಾರ, ಮಾರ್ಚ್ 29, 2020
19 °C

ಚಿಟ್ಟೆ-ಹೂವು

ದಾದು ಭಯ್ಯಾ Updated:

ಅಕ್ಷರ ಗಾತ್ರ : | |

Prajavani

ಪುಟ್ಟನೊಂದು ಹೂವ ಕಿತ್ತ

ಮುಟ್ಟಿ ನೋಡಿ ಖುಷಿಯ ಪಟ್ಟ

ದಳಗಳೆಣಿಸಿ ಕೂಡಿ ಕಳೆದು

ಗಣಿತ ಬರುವುದೆಂದು ಬೀಗಿ

ಮನೆಯ ಬದಿಯ ಹಾದಿಯಲ್ಲಿ

ಮುಷ್ಟಿಯಲ್ಲಿ ಮಡಚಿ ಹಿಡಿದು

ಚಿಟ್ಟೆ ಹಾರಿಬಿಟ್ಟೆ ಎನುತ

ಹಾಡೋಡಿ ಮನೆಯ ಸೇರಿದ

ಪುಟ್ಟಿಗದನು ತೋರಿದ

 

ಹೂವಿನಾಸೆ ಇರದ ಪುಟ್ಟಿ

ಬೇಡವೆನಲು ಬಾಬುಕಟ್ಟಿ

‘ಅಮ್ಮನಿಗೊ ಬೊಮ್ಮನಿಗೊ

ಹೇಳ್ವ ಪ್ರೀತಿಯಿಂದ ತಗೋ’

ಎನುವ  ಬಿಟ್ಟಿ ಸಲಹೆ ದೂಡಿದ;

 

ಸದಾ ಓದು ಎನುವ  ಅಮ್ಮ

ಗುಮ್ಮಭಯ ಕಳೆಯದಾ ಬೊಮ್ಮ

ಚಿಟ್ಟೆ ಹೂವ ಪಡೆಯರು

ಎನುತ ದುಗುಡ ತೋಡಿದ

 

ಪುಟ್ಟಿದೊಂದು  ಕ್ಲಿಪ್ಪು ಕದ್ದು

ಮಿರರ್‍ರಿನ ಮುಂದೆ ನಿಂತು

ನೀಲಿಪೋರ ಹೂವ ಮುಡಿದು

ಮುಗುಳ್ನಕ್ಕು ಮಿನುಗಿದ

 

ಮಾಯದಲ್ಲಿ ಆಯಿ ನೋಡಿ

ಬೈದ ತಾಯ್ಗೆ ತಿರುಗಿ ಬೈದು

ಬ್ಯಾಗಿನೊಳಗೆ ಫೆವಿಕಾಲು ಹಿಡಿದು 

ಪುಟ್ಟ ತೊಡರುಗಾಲು ಹಾಕಿ 

ಕಿತ್ತ ಹೂವಗಿಡವ ಸೇರಿದ 

 

ಅಂಟದೆ ಉರುಳಿ ನೆಲಕೆ ಬಿದ್ದ 

ಹೂವ ಜೋಡಿ ಉಮ್ಮಳಿಸಿ ದುಃಖ 

ಕಣ್ಣು ನೀರು ತುಂಬಿ ಬಿತ್ತು 

ಭುವಿಗೆ ಪುಟ್ಟ ಕಂಬನಿ 

ಅಂಗಳದಿ ಮಳೆಯ ಇಬ್ಬನಿ 

 

ಕೊನೆಗೆ ಮರುಗಿ ಹೂವು ಹಾರಿ 

ರೆಕ್ಕೆಯೇರಿ ಚಿಟ್ಟೆಯಾಗಿ 

ದೂರ ದೂರ ತೇಲಿತು 

ತರಲೆ ಪುಟ್ಟ ಕಣ್ಣನರಳಿ 

ಬೆರಗಿನಿಂದ ಹೇಳಿದ 

‘ಹೂವು ಹೂವು’ ಕೂಗಿದ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)