ಚಲಿಸದ ಮೋಡಗಳು!

ಸೋಮವಾರ, ಮೇ 27, 2019
34 °C

ಚಲಿಸದ ಮೋಡಗಳು!

Published:
Updated:

‘ಚಲಿಸದ ಮೋಡಗಳು’ ಸಿನಿಮಾ ಟೈಟಲ್ ರಿಜಿಸ್ಟರ್ ಮಾಡಿಸಿ ಖುಷಿಯಿಂದ ಹೊರಬಂದ ಪ್ರೊಡ್ಯೂಸರ್ ವಿಜಿ.

‘ಸರ್, ಅದು ಚಲಿಸುವ ಮೋಡಗಳು ಆಗಬೇಕಿತ್ತಲ್ವಾ?’ ಕೇಳ್ದ ಅಸಿಸ್ಟೆಂಟ್ ಮುದ್ದಣ್ಣ.

‘ಹಾಗಲ್ಲ, ಇದು ಸಂಪೂರ್ಣ ಸೈನ್ಸ್ ಅಂಡ್ ಟೆಕ್ನಾಲಜಿ ಆಧಾರಿತ ಸಿನಿಮಾ. ಐದು ವರ್ಷಗಳಿಂದ ಚಲಿಸದೇ ನಿಂತಿರುವ ಮೋಡಗಳನ್ನು 21ನೇ ಶತಮಾನದ ಹೀರೊ ಹೇಗೆ ಮುಂದೋಡುವಂತೆ ಮಾಡುತ್ತಾನೆ ಎನ್ನುವುದು ಈ ಸಿನಿಮಾದಲ್ಲಿದೆ’– ಅದ್ಭುತ ಕಥೆಯೊಂದನ್ನು ಸಿನಿಮಾ ಮಾಡುತ್ತಿರುವ ಉತ್ಸಾಹದಲ್ಲಿ ಹೇಳ್ದ ವಿಜಿ.

‘ಇಂಟರೆಸ್ಟಿಂಗ್ ಸರ್... ಕಥೆ ಹೇಳಿ ಪ್ಲೀಸ್’ ಕೋರಿದ ಮುದ್ದಣ್ಣ.

‘ಪುಷ್ಪಕ ವಿಮಾನದಲ್ಲಿ ಹೀರೊ ಹೋಗ್ತಿರ್ತಾನೆ...’

‘ಸರ್, ಒಂದ್ನಿಮಿಷ. ಟ್ವೆಂಟಿ ಫಸ್ಟ್ ಸೆಂಚುರಿ ಹೀರೊ ಅಂತೀರಿ... ಪುಷ್ಪಕ ವಿಮಾನದ ಕಲ್ಪನೆ ಯಾವ ಕಾಲದ್ದು ಸರ್... ಹೀರೊ ಮುತ್ತಾತನ ಮುತ್ತಾತನೂ ಹುಟ್ಟಿರಲಿಲ್ಲ ಅನ್ಸುತ್ತೆ. ಸ್ವಲ್ಪನಾದರೂ ಲಾಜಿಕ್ ಇರಬೇಡ್ವ’ ನಗುತ್ತಲೇ ಕೇಳ್ದ ಮುದ್ದಣ್ಣ.

‘ನಿನಗೆ ಲಾಜಿಕ್ ಬೇಕೋ, ಎಂಟರ್ಟೈನ್‌ಮೆಂಟ್‌ ಬೇಕೋ’ ಸಿಟ್ಟಲ್ಲೇ ಪ್ರಶ್ನಿಸಿದ ವಿಜಿ.

‘ಎಂಟರ್ಟೈನ್‌ಮೆಂಟ್‌’.

‘ಹಾಗಾದರೆ ಸುಮ್ನೆ ಕೇಳಿಸ್ಕೊ... ಮಂತ್ರಿಸಿದ ರೇಡಾರ್‌ಗಳನ್ನು ಪುಷ್ಪಕ ವಿಮಾನದಲ್ಲಿ ಇಟ್ಟು
ಕೊಂಡು ಹೊರಟ ಹೀರೊ, ಬ್ರಾಹ್ಮಿ ಮುಹೂರ್ತದಲ್ಲಿ ಅವುಗಳನ್ನು ಉಡಾಯಿಸಿ...’

‘ಸಾರ್..‌. ಸಾರ್... ಸಾರ್... ನಿಲ್ಸಿ. ಎಲ್ಲಿಯ ರೇಡಾರ್, ಎಲ್ಲಿಯ ಮಂತ್ರ, ಮತ್ತೆಲ್ಲಿಯ ಬ್ರಾಹ್ಮಿ ಮುಹೂರ್ತ. ಒಂದಕ್ಕೊಂದು ಸಂಬಂಧಾನೇ ಇಲ್ವಲ್ಲ ಸಾರ್. ಲಾಜಿಕ್ ಇರ್ಲಿ ಸಾರ್ ಪ್ಲೀಸ್’.

‘ಏನ್ ಲಾಜಿಕ್ ಲಾಜಿಕ್ ಅಂತಾ ಬಡ್ಕೊಳ್ತೀರ್ರೀ. ಹೀರೊ ಹೇಳೋ ಡೈಲಾಗ್‌ಗಳಿಂದಾಗೋ ಮ್ಯಾಜಿಕ್ ನೋಡ್ರಿ. ಏನ್ ಮಾತಾಡಿದ್ರೂ ಎಲ್ರೂ ಹೇಗೆ ನಮೋ ನಮೋ ಅಂತಾರೆ ಅದನ್ನ ಗಮನಿಸಿ’ ಖುಷಿಯಿಂದಲೇ ಕಥೆ ಮುಂದುವರಿಸಿದ ವಿಜಿ‌.

‘ರೇಡಾರ್‌ಗಳಿಂದ ಮೋಡಗಳನ್ನು ಚದುರಿಸಲು ಸಾಧ್ಯವಾಗದಿದ್ದಾಗ ಚಂದ್ರನಿಗೊಂದು ಇ-ಮೇಲ್ ಮಾಡುವ ನಾಯಕ...’

ವಿಜಿಯ ಮಾತುಗಳನ್ನು ಅರ್ಧದಲ್ಲೇ ತಡೆದು, ಕಣ್ಣು ಕೆಂಪಗೆ ಮಾಡಿಕೊಂಡು ಬಾಯಿ ತೆಗೆದ ಮುದ್ದಣ್ಣ, ‘ಚಲಿಸದ ಮೋಡಗಳು ಬದಲಿಗೆ ಈ ಸಿನಿಮಾಗೆ ಬೇರೆ ಹೆಸರಿಡಿ ಸಾರ್...’

‘ಏನಂತ?’ ‘ಚಲಿಸದ ಮೆದುಳುಗಳು!’

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !