ಮತ ಹಾಕಿ, ಉಚಿತ ತಿಂಡಿ ತಿನ್ನಿ

ಗುರುವಾರ , ಏಪ್ರಿಲ್ 25, 2019
21 °C

ಮತ ಹಾಕಿ, ಉಚಿತ ತಿಂಡಿ ತಿನ್ನಿ

Published:
Updated:
Prajavani

ಬೆಂಗಳೂರು: ಮತ ಹಾಕುವುದನ್ನು ಉತ್ತೇಜಿಸಲು ಸಂಘ, ಸಂಸ್ಥೆಗಳು ಈಗಾಗಲೇ ಹಲವು ರೀತಿಯ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿವೆ. ನೃಪತುಂಗ ರಸ್ತೆಯಲ್ಲಿರುವ ಭಾರತೀಯ ರಿಸರ್ವ್‌ ಬ್ಯಾಂಕ್‌ ಬಳಿಯ ಹೋಟೆಲ್‌ ನಿಸರ್ಗ ಗ್ರ್ಯಾಂಡ್‌ ಮತದಾನ ಮಾಡಿದವರಿಗೆ ತಿಂಡಿಯನ್ನು ಉಚಿತವಾಗಿ ನೀಡುವುದಾಗಿ ಘೋಷಿಸಿದೆ.

ಏಪ್ರಿಲ್‌ 18ರಂದು ಮತದಾರರು ಮತದಾನ ಮಾಡಿದ ಗುರುತು ತೋರಿಸಿ ನಿಸರ್ಗ ಗ್ರ್ಯಾಂಡ್‌ನಲ್ಲಿ ಉಚಿತವಾಗಿ ಬೆಣ್ಣೆದೋಸೆ, ಸಿಹಿತಿಂಡಿ ಮತ್ತು ಪಾನಕ ಸವಿಯಬಹುದು. 

ಈ ಕುರಿತು ಹೋಟೆಲ್‌ ಎದುರು ದೊಡ್ಡ ಬೋರ್ಡ್‌ ಹಾಕಲಾಗಿದೆ. ಇದೊಂದು ಅಪ್ಪಟ ಸಾಮಾಜಿಕ ಕಳಕಳಿಯುಳ್ಳ ರಾಜಕೀಯೇತರ ಕಾರ್ಯಕ್ರಮ ಎಂದು ಹೇಳಲಾಗಿದೆ. ಮತದಾನದ ಉತ್ತೇಜಿಸುವ ಸಲುವಾಗಿ ಈ ಕೊಡುಗೆ ನೀಡಲಾಗಿದೆ ಎಂದು ಹೋಟೆಲ್‌ ಹೇಳಿಕೊಂಡಿದೆ. ‘ಮತ ಚಲಾಯಿಸಿ ಸಮೃದ್ಧ ಭಾರತ ನಿರ್ಮಿಸಿ’ ಎಂಬ ಘೋಷಣೆಗಳು ಬೋರ್ಡ್‌ನಲ್ಲಿವೆ.

 

ಬರಹ ಇಷ್ಟವಾಯಿತೆ?

  • 20

    Happy
  • 2

    Amused
  • 0

    Sad
  • 0

    Frustrated
  • 1

    Angry

Comments:

0 comments

Write the first review for this !