ಕತಾರ್: ತಾಲಿಬಾನ್ ರಾಜಕೀಯ ಕಚೇರಿ ಮುಖ್ಯಸ್ಥನಾಗಿ ಬರಾದರ್ ನೇಮಕ

7

ಕತಾರ್: ತಾಲಿಬಾನ್ ರಾಜಕೀಯ ಕಚೇರಿ ಮುಖ್ಯಸ್ಥನಾಗಿ ಬರಾದರ್ ನೇಮಕ

Published:
Updated:

ಕಾಬುಲ್‌: ಕತಾರ್‌ನಲ್ಲಿರುವ ತಾಲಿಬಾನ್‌ ಸಂಘಟನೆಯ ರಾಜಕೀಯ ಕಚೇರಿ ಮುಖ್ಯಸ್ಥನಾಗಿ ಮುಲ್ಲಾ ಅಬ್ದುಲ್‌ ಘನಿ ಬರಾದರ್‌ನನ್ನು ಗುರುವಾರ ನೇಮಕ ಮಾಡಲಾಗಿದೆ. ಈ ಮೂಲಕ ಅಮೆರಿಕ ಜತೆಗಿನ ಶಾಂತಿ ಮಾತುಕತೆಗೆ ಬಲ ತುಂಬಲು ಸಂಘಟನೆ ನಿರ್ಧರಿಸಿದೆ.

ಪಾಕಿಸ್ತಾನದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದ ಮುಲ್ಲಾ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಬಿಡುಗಡೆಯಾಗಿದ್ದ. ಆತನನ್ನು ರಾಜಕೀಯ ಮುಖಂಡನನ್ನಾಗಿ ನೇಮಕ ಮಾಡಿರುವ ಬಗ್ಗೆ ಸಂಘಟನೆಯ ಉನ್ನತ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.

‘ಅಮೆರಿಕ ಜತೆಗೆ ನಡೆಯಲಿರುವ ಮಾತುಕತೆಯನ್ನು ಸಮರ್ಥವಾಗಿ ನಿಭಾಯಿಸಲು ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ’ ಎಂದು ತಾಲಿಬಾನ್‌ ಸಂಘಟನೆ ಹೇಳಿಕೆ ಬಿಡುಗಡೆ ಮಾಡಿದೆ.

ಇದನ್ನೂ ಓದಿ: ಶಾಂತಿಪ್ರಕ್ರಿಯೆ: ತಾಲಿಬಾನ್‌ ಮನವೊಲಿಕೆ

ತಾಲಿಬಾನ್ ಪ್ರತಿನಿಧಿಗಳೊಂದಿಗೆ ಎರಡು ದಿನಗಳಿಂದ ಅಮೆರಿಕದ ಪ್ರತಿನಿಧಿ ಝಾಲ್ಮೆ ಖಲೀಲ್‌ಜಾದ್ ಅವರು ಮಾತುಕತೆ ನಡೆಸಿದ್ದಾರೆ. ಮಾತುಕತೆ ಮುಂದುವರಿಯುವ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ‘ಬರಾದರ್‌ ಕೂಡಲೇ ಕತಾರ್‌ಗೆ ತೆರಳಲಿದ್ದಾರೆ. ಶಾಂತಿ ಮಾತುಕತೆಯಲ್ಲಿ ಸಂಘಟನೆಯ ಹಿರಿಯ ನಾಯಕರು ಭಾಗವಹಿಸುವುದನ್ನು ಅಮೆರಿಕವು ಬಯಸಿದ್ದರಿಂದಲೇ ಬರಾದರ್‌ ನೇಮಕ ಮಾಡಲಾಗಿದೆ’ ಎಂದು ಮೂಲಗಳಿಂದ ತಿಳಿದುಬಂದಿದೆ.

ಆಫ್ಗಾನಿಸ್ತಾನದ ದಕ್ಷಿಣ ಪ್ರಾಂತ್ಯಗಳಲ್ಲಿ ಬಂಡುಕೋರರ ಗುಂಪಿನೊಡನೆ ಮಿಲಿಟರಿ ಕಾರ್ಯಾಚರಣೆಯ ಉಸ್ತುವಾರಿ ವಹಿಸಿದ್ದ ಬರಾದರ್‌ನನ್ನು ಐಎಸ್‌ಐ ಹಾಗೂ ಅಮೆರಿಕ ಕೇಂದ್ರೀಯ ತನಿಕಾ ಸಂಸ್ಥೆ 2010ರಲ್ಲಿ ಬಂಧಿಸಿದ್ದವು. ತಾಲಿಬಾನ್‌ ಹಾಗೂ ಖಲೀಲ್‌ಜಾದ್ ನಡುವೆ ಉನ್ನತ ಮಟ್ಟದ ಮಾತುಕತೆ ಬಳಿಕ ಆತನನ್ನು ಕಳೆದ ವರ್ಷ ಬಿಡುಗಡೆ ಮಾಡಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 1

  Frustrated
 • 0

  Angry

Comments:

0 comments

Write the first review for this !