ಹಾಸ್ಯನಟ ಉಕ್ರೇನ್‌ ಅಧ್ಯಕ್ಷ

ಶುಕ್ರವಾರ, ಮೇ 24, 2019
29 °C
ಅನನುಭವಿ ರಾಜಕಾರಣಿ ವೊಲೊಡಿಮಿರ್‌ ಝೆಲೆಂಸ್ಕಿಗೆ ಐತಿಹಾಸಿಕ ಜಯ

ಹಾಸ್ಯನಟ ಉಕ್ರೇನ್‌ ಅಧ್ಯಕ್ಷ

Published:
Updated:
Prajavani

ಕೀವ್‌: ಉಕ್ರೇನ್‌ನ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಭೇರಿ ಬಾರಿಸಿರುವ ಹಾಸ್ಯನಟ ವೊಲೊಡಿಮರ್‌ ಝೆಲೆಂಸ್ಕಿ ಅಧ್ಯಕ್ಷ ಹುದ್ದೆಗೇರಲಿದ್ದಾರೆ. ಹಾಲಿ ಅಧ್ಯಕ್ಷ ಪೆಟ್ರೊ ಪೊಸೊಶೆಂಕೊರನ್ನು ಪರಾಭವಗೊಳಿಸಿರುವ ಅನನುಭವಿ ರಾಜಕಾರಣಿ ಝೆಲೆಂಸ್ಕಿ ಉಕ್ರೇನ್‌ನಲ್ಲಿ ಹೊಸ ಇತಿಹಾಸ ಬರೆದಿದ್ದಾರೆ.

ಟಿವಿ ಸೀರಿಯಲ್‌ಗಳಲ್ಲಿ, ನಾಟಕಗಳಲ್ಲಿ ಹಾಸ್ಯನಟರಾಗಿ ಜನರನ್ನು ರಂಜಿಸಿರುವ ಝೆಲೆಂಸ್ಕಿ, ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತೇನೆ ಎಂಬ ಭರವಸೆ ನೀಡಿ ಅಧಿಕಾರಕ್ಕೆ ಬಂದಿದ್ದಾರೆ. ಒಟ್ಟು ಮತಗಳಲ್ಲಿ ಶೇ 73ರಷ್ಟು ಮತಗಳನ್ನು ಪಡೆದಿರುವುದು ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ.

ಝೆಲೆಂಸ್ಕಿ ಅವರ ಸಹನಟರು, ಅವರ ಕಾರ್ಯಕ್ರಮದ ನಿರ್ಮಾಪಕರು ಮತ್ತು ಸಂಭಾಷಣಕಾರರೇ ಝೆಲೆಂಸ್ಕಿ ಅವರ ಪರ ಪ್ರಚಾರದಲ್ಲಿ ತೊಡಗಿದ್ದರು. ತಮ್ಮ ಸಂಪುಟದಲ್ಲಿ ಯಾರನ್ನು ಸೇರಿಸಿಕೊಳ್ಳುತ್ತಾರೆ ಎಂಬ ಬಗ್ಗೆ ಅವರು ಯಾವುದೇ ಮಾಹಿತಿ ನೀಡಿಲ್ಲ.

Tags: 

ಬರಹ ಇಷ್ಟವಾಯಿತೆ?

 • 3

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !