ಮಹಿಳೆ ಜತೆ ಅನುಚಿತ ವರ್ತನೆ: ಟ್ವಿಟರ್‌ನಲ್ಲಿ ದೂರು; ಕಂಡಕ್ಟರ್‌ ವಿಚಾರಣೆ

7

ಮಹಿಳೆ ಜತೆ ಅನುಚಿತ ವರ್ತನೆ: ಟ್ವಿಟರ್‌ನಲ್ಲಿ ದೂರು; ಕಂಡಕ್ಟರ್‌ ವಿಚಾರಣೆ

Published:
Updated:

ಬೆಂಗಳೂರು: ಮಹಿಳೆ ಜತೆ ಅನುಚಿತವಾಗಿ ವರ್ತಿಸಿದ ಆರೋಪದಡಿ ಬಿಎಂಟಿಸಿ ಬಸ್ ಕಂಡಕ್ಟರ್‌ವೊಬ್ಬರನ್ನು ಎಲೆಕ್ಟ್ರಾನಿಕ್‌ಸಿಟಿ ಪೊಲೀಸರು ಬುಧವಾರ ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ.

‘ನನಗೆ ಗೊತ್ತಿರುವ ಮಹಿಳೆಯೊಬ್ಬರ ಜತೆ ಈ ಕಂಡಕ್ಟರ್ ಅಸಭ್ಯವಾಗಿ ವರ್ತಿಸಿದ್ದಾರೆ’ ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದ ಯುವತಿಯೊಬ್ಬರು, ಆ ಕಂಡಕ್ಟರ್‌ನ ಫೋಟೊ ಹಾಗೂ ಬಸ್‌ನ ನೋಂದಣಿ ಸಂಖ್ಯೆಯನ್ನೂ ಪ್ರಕಟಿಸಿದ್ದರು.

ಈ ದೂರನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ನೋಂದಣಿ ಸಂಖ್ಯೆ ಆಧಾರದ ಮೇಲೆ ಬಸ್ ಪತ್ತೆ ಮಾಡಿದರು. ‘ನಾನು ಯಾರ ಜತೆಗೂ ದುರ್ವರ್ತನೆ ತೋರಿಲ್ಲ. ಹಾಗೆ ನಡೆದುಕೊಂಡಿದ್ದರೆ, ಅವರೇ ನೇರವಾಗಿ ಬಂದು ದೂರು ಕೊಡಲಿ’ ಎಂದು ಕಂಡಕ್ಟರ್ ಪೊಲೀಸರಿಗೆ ಹೇಳಿಕೆ ಕೊಟ್ಟಿದ್ದಾರೆ.

‘ಮೂರನೇ ವ್ಯಕ್ತಿ ಕೊಟ್ಟಿರುವ ದೂರಿನ ಮೇಲೆ ಎಫ್‌ಐಆರ್‌ ದಾಖಲಿಸಬೇಡಿ. ಸಂತ್ರಸ್ತೆ ದೂರು ಕೊಟ್ಟರಷ್ಟೇ ಪರಿಗಣಿಸಿ ಕ್ರಮ ತೆಗೆದುಕೊಳ್ಳಿ’ ಎಂದು ಹಿರಿಯ ಅಧಿಕಾರಿಗಳು ಸೂಚನೆ ನೀಡಿದರು. ಹೀಗಾಗಿ, ಕರೆದಾಗ ವಿಚಾರಣೆಗೆ ಬರುವಂತೆ ಸೂಚಿಸಿ ಕಂಡಕ್ಟರ್‌ನನ್ನು ಬಿಟ್ಟು ಕಳುಹಿಸಲಾಯಿತು ಎಂದು ಎಲೆಕ್ಟ್ರಾನಿಕ್‌ಸಿಟಿ ಪೊಲೀಸರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !