ಸಮ್ಮಿಶ್ರ ಸರ್ಕಾರದ ತಂದೆ–ತಾಯಿ ಕಾಂಗ್ರೆಸ್‌..!

7

ಸಮ್ಮಿಶ್ರ ಸರ್ಕಾರದ ತಂದೆ–ತಾಯಿ ಕಾಂಗ್ರೆಸ್‌..!

Published:
Updated:

ವಿಜಯಪುರ:  ‘ರಾಜ್ಯದಲ್ಲಿರುವ ಸಮ್ಮಿಶ್ರ ಸರ್ಕಾರದ ತಂದೆ–ತಾಯಿ ಎರಡೂ ಕಾಂಗ್ರೆಸ್‌ ಪಕ್ಷವೇ ಆಗಿದೆ’ ಎಂದು ಮುದ್ದೇಬಿಹಾಳದ ಬಿಜೆಪಿ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಟೀಕಿಸಿದರು.

‘ಬಿಜೆಪಿ ಅಧಿಕಾರಕ್ಕೆ ಬಂದರೇ ತನ್ನ ಆಡಳಿತದ ಅವಧಿಯ ಭ್ರಷ್ಟಾಚಾರ, ಹುಳುಕು ಹೊರಬರಲಿದೆ ಎಂಬ ಭಯದಿಂದ ಜೆಡಿಎಸ್‌ಗೆ ಬೆಂಬಲ ನೀಡಿದ್ದ ಕಾಂಗ್ರೆಸ್‌, ಇದೀಗ ಮುಖ್ಯಮಂತ್ರಿಯ ಹಿಂದೆ ಕೂತು ಆಟವಾಡ್ತಿದೆ’ ಎಂದು ಸೋಮವಾರ ವಿಜಯಪುರದಲ್ಲಿ ಮಾಧ್ಯಮದವರಿಗೆ ತಿಳಿಸಿದರು.

‘ಸಮ್ಮಿಶ್ರ ಸರ್ಕಾರದಲ್ಲಿ ಜಮೀರ್‌ ಅಹಮದ್‌ ಮೋಸ್ಟ್‌ ಪವರ್‌ಫುಲ್‌. ಅವರಿಗೆ ಸೂಪರ್‌ ಕಾರು ಕೊಡಬೇಕು. ಇಲ್ಲದಿದ್ದರೇ ಸರ್ಕಾರಕ್ಕೆ ಕಂಟಕವಾಗಿ ಕಾಡಲಿದ್ದಾರೆ’ ಎಂದು ನಡಹಳ್ಳಿ ಕುಟುಕಿದರು.

‘ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ರೈತರ ಸಾಲ ಮನ್ನಾ ಮಾಡುವೆ ಎಂದಿದ್ದ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ತಿಂಗಳು ಕಳೆದರೂ ಈ ನಿಟ್ಟಿನಲ್ಲಿ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ’ ಎಂದು ವಾಗ್ದಾಳಿ ನಡೆಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !