ಪ್ರಮಾಣ ಸ್ವೀಕರಿಸುವುದಕ್ಕೇ ಬಿಎಸ್‌ವೈ ದೆಹಲಿಯಿಂದ ಬಂದಿರಬೇಕು: ಎಚ್‌ಡಿಕೆ ವ್ಯಂಗ್ಯ

7

ಪ್ರಮಾಣ ಸ್ವೀಕರಿಸುವುದಕ್ಕೇ ಬಿಎಸ್‌ವೈ ದೆಹಲಿಯಿಂದ ಬಂದಿರಬೇಕು: ಎಚ್‌ಡಿಕೆ ವ್ಯಂಗ್ಯ

Published:
Updated:

ಬೆಂಗಳೂರು:  ‘ಸಮ್ಮಿಶ್ರ ಸರ್ಕಾರವನ್ನು ಬೀಳಿಸುವ ವ್ಯರ್ಥ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ರಾಜ್ಯದ ರಾಜಕಾರಣ ಎಲ್ಲಿಗೆ ಹೋಗಿ ಮುಟ್ಟುತ್ತೆ ನೋಡೋಣ’ ಎಂದು ಸಚಿವ ಡಿ.ಕೆ.ಶಿವಕುಮಾರ್‌ಗೆ ಐಟಿ ಭೀತಿ ಎದುರಾಗಿರುವ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿ ಹೀಗೆ ಪ್ರತಿಕ್ರಿಯಿಸಿದರು.

‘ಬಹುಷ್ಯ ಸರ್ಕಾರವನ್ನ ಬದಲಿಸಿ, ಪ್ರಮಾಣವಚನ ಸ್ವೀಕರಿಸುವುದಕ್ಕಾಗಿಯೇ ಯಡಿಯೂರಪ್ಪ ದೆಹಲಿಯಿಂದ ವಾಪಸ್ ಬಂದಿರಬೇಕು’ ಎಂದು ವ್ಯಂಗ್ಯವಾಡಿದರು.

‘ತೈಲ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ಸೆಪ್ಟೆಂಬರ್‌ 10 ರಂದು ಬಂದ್‌ಗೆ ಕರೆ ಕೊಟ್ಟಿದೆ. ಇದಕ್ಕೆ ಸರ್ಕಾರದ ಸಂಪೂರ್ಣ ಬೆಂಬಲ ಇದೆ. ಬೆಲೆ ಏರಿಕೆಯಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ’ ಎಂದರು.

‘ಜಿ.ಟಿ.ದೇವೇಗೌಡ ಅವರೇ ಮೈಸೂರು ಜಿಲ್ಲಾ ಉಸ್ತುವಾರಿ. ಅವರ ನೇತೃತ್ವದಲ್ಲಿಯೇ ಕಾರ್ಯಕ್ರಮಗಳು ನಡೆಯುತ್ತವೆ’ ಎಂದು ದಸರಾ ಉಸ್ತುವಾರಿಯನ್ನು ಸ.ರಾ.ಮಹೇಶ್‌ ಅವರಿಗೆ ವಹಿಸಿರುವ ಕುರಿತು ಎದುರಾದ ಪ್ರಶ್ನೆಗೆ ಉತ್ತರಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !