ಕ್ರಿಕೆಟ್ ಬೆಟ್ಟಿಂಗ್: ₹1 ಲಕ್ಷ ಜಪ್ತಿ

7

ಕ್ರಿಕೆಟ್ ಬೆಟ್ಟಿಂಗ್: ₹1 ಲಕ್ಷ ಜಪ್ತಿ

Published:
Updated:

ಬೆಂಗಳೂರು: ಇತ್ತೀಚೆಗೆ ನಡೆದ ಭಾರತ ಹಾಗೂ ಆಸ್ಟ್ರೇಲಿಯಾ ಕ್ರಿಕೆಟ್ ಪಂದ್ಯದ ವೇಳೆ ಬೆಟ್ಟಿಂಗ್ ಆಡುತ್ತಿದ್ದ ಆರೋಪದಡಿ ಹನುಮಾನ ಪಟೇಲ್ (28) ಎಂಬಾತನನ್ನು ಬಂಧಿಸಿರುವ ಸಿಸಿಬಿ ಪೊಲೀಸರು, ಆತನಿಂದ ₹1.02 ಲಕ್ಷ ನಗದು ಜಪ್ತಿ ಮಾಡಿದ್ದಾರೆ. 

‘ಆಜಾದ್ ನಗರದ ನಿವಾಸಿ ಹನುಮಾನ್, ಸ್ನೇಹಿತರು ಹಾಗೂ ಅವರಿಂದ ಪರಿಚಯವಾದವರಿಂದ ಹಣ ಕಟ್ಟಿಸಿಕೊಂಡು ಬೆಟ್ಟಿಂಗ್‌ ನಡೆಸುತ್ತಿದ್ದ. ಭಾರತ ಗೆದ್ದರೆ ₹900ಕ್ಕೆ ₹1,000 ಹಾಗೂ ಆಸ್ಟ್ರೇಲಿಯಾ ಗೆದ್ದರೆ ₹1,000ಕ್ಕೆ ₹900 ವಾಪಸ್ ಕೊಡುವುದಾಗಿ ಹೇಳಿದ್ದ’ ಎಂದು ಸಿಸಿಬಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ಕಲಾಸಿಪಾಳ್ಯದ ಜನರಲ್ ಈಸ್ಟ್ ಕಾಲೊನಿಯ ಮಹದೇವ್ ಆಟೊ ಮೊಬೈಲ್ ಅಂಗಡಿಯನ್ನು ಕ್ರಿಕೆಟ್ ಬೆಟ್ಟಿಂಗ್ ಅಡ್ಡೆ ಮಾಡಿಕೊಂಡಿದ್ದ. ಆ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ದಾಳಿ ಮಾಡಿ ಆತನನ್ನು ಬಂಧಿಸಲಾಯಿತು. ಎರಡು ಮೊಬೈಲ್‌ಗಳು ಹಾಗೂ ಬೆಟ್ಟಿಂಗ್ ಮಾಹಿತಿ ಇದ್ದ ಚೀಟಿಗಳನ್ನು ಸಹ ಜಪ್ತಿ ಮಾಡಲಾಗಿದೆ’ 

‘ಬೆಟ್ಟಿಂಗ್‌ಗಾಗಿ ‘ಬೆಟ್‌ಫೇರ್’ ಎಂಬ ಆ್ಯಪ್‌ ಬಳಕೆ ಮಾಡುತ್ತಿದ್ದ ಆರೋಪಿ, ಮೊಬೈಲ್ ಹಾಗೂ ವಾಟ್ಸ್‌ಆ್ಯಪ್‌ ಸಂದೇಶಗಳ ಮೂಲಕವೂ ಬೆಟ್ಟಿಂಗ್‌ ಕಟ್ಟಿಸಿಕೊಳ್ಳುತ್ತಿದ್ದ. ಆತನ ಜೊತೆ ಸಂಪರ್ಕದಲ್ಲಿದ್ದು ಬೆಟ್ಟಿಂಗ್ ಕಟ್ಟುತ್ತಿದ್ದ 11 ಮಂದಿ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲಿದ್ದೇವೆ’ ಎಂದು ಅಧಿಕಾರಿ ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !