ಪತ್ನಿಯ ಕೊಂದು, ಆತ್ಮಹತ್ಯೆಯ ಕತೆ ಕಟ್ಟಿದ!

ಶನಿವಾರ, ಮೇ 25, 2019
32 °C
ಸಾವಿನ ರಹಸ್ಯ ಬಯಲು ಮಾಡಿದ ತನಿಖೆ l ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೇ ಹತ್ಯೆ

ಪತ್ನಿಯ ಕೊಂದು, ಆತ್ಮಹತ್ಯೆಯ ಕತೆ ಕಟ್ಟಿದ!

Published:
Updated:
Prajavani

ಬೆಂಗಳೂರು: ಮಹಿಳೆಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ರಮೇಶ್ ಬಾಬು (33) ಎಂಬಾತ, ಅದನ್ನು ಪ್ರಶ್ನಿಸಿದ ಪತ್ನಿಯನ್ನೇ ಉಸಿರುಗಟ್ಟಿಸಿ ಕೊಲೆ ಮಾಡಿದ. ಬಳಿಕ ತಾನೇ ಫ್ಯಾನ್‌ಗೆ ನೇಣಿನ ಕುಣಿಕೆ ಕಟ್ಟಿ, ಆತ್ಮಹತ್ಯೆ ಎಂದು ಬಿಂಬಿಸಲು ಹೊರಟಿದ್ದ. ಆದರೆ, ಪೊಲೀಸರ ತನಿಖೆ ಸಾವಿನ ರಹಸ್ಯವನ್ನು ಭೇದಿಸಿ ಆರೋಪಿಯನ್ನು ಕಂಬಿ ಹಿಂದೆ ಕಳುಹಿಸಿದೆ.

ಎಲೆಕ್ಟ್ರಾನಿಕ್‌ ಸಿಟಿ ಸಮೀಪದ ದೊಡ್ಡತೋಗೂರಿನಲ್ಲಿ ಶನಿವಾರ ರಾತ್ರಿ ಈ ಘಟನೆ ನಡೆದಿದ್ದು, ಚಿತ್ತೂರಿನ ಪ್ರಿಯಾಂಕಾ (26) ಕೊಲೆಯಾದ
ವರು.

ವೈಟ್‌ಫೀಲ್ಡ್ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ ರಮೇಶ್, ದೂರದ ಸಂಬಂಧಿ ಪ್ರಿಯಾಂಕಾ ಅವರನ್ನು ಏಳು ವರ್ಷಗಳ ಹಿಂದೆ ವಿವಾಹವಾಗಿದ್ದ. ದಂಪತಿಗೆ 4 ವರ್ಷದ ಮಗಳಿದ್ದು, ಆಕೆ ತನ್ನ ಅಜ್ಜಿ–ತಾತನ ಜತೆ ಚಿತ್ತೂರಿನಲ್ಲೇ ಇದ್ದಳು. ಪ್ರಿಯಾಂಕಾ ಮನೆ ಸಮೀಪದ ‘ಅರವಿಂದ ಗಾರ್ಮೆಂಟ್ಸ್‌’ ಕಾರ್ಖಾನೆಗೆ ಕೆಲಸಕ್ಕೆ ಹೋಗುತ್ತಿದ್ದರು ಎಂದು ಪೊಲೀಸರು ಹೇಳಿದರು.

ಗುಟ್ಟು ರಟ್ಟಾಗಿ ನೋವು ದುಪ್ಪಟ್ಟು: ಮದ್ಯವ್ಯಸನಿಯಾದ ರಮೇಶ್, ಆರು ತಿಂಗಳಿನಿಂದ ಬೇರೆ ಮಹಿಳೆಯೊಂದಿಗೆ ಸಂಪರ್ಕದಲ್ಲಿದ್ದ. ಈ ವಿಚಾರ ತಿಳಿದ ಪ್ರಿಯಾಂಕಾ, ಆಕೆಯಿಂದ ದೂರ ಇರುವಂತೆ ಬುದ್ಧಿಮಾತು ಹೇಳಿದ್ದರು. ಆದರೂ ಆತ ಮಾತು ಕೇಳಿರಲಿಲ್ಲ. ದಂಪತಿಯಲ್ಲೇ ಗುಟ್ಟಾಗಿ ಉಳಿದಿದ್ದ ಈ ಸಂಗತಿ, ಕೆಲ ದಿನಗಳ ಹಿಂದೆ ಇಡೀ ವಠಾರಕ್ಕೇ ಗೊತ್ತಾಗಿತ್ತು. ಆ ನಂತರ ಪ್ರಿಯಾಂಕಾ ಅವರ ನೋವು, ಬೇಸರ ದುಪ್ಪಟ್ಟಾಗಿತ್ತು.

ಶನಿವಾರ ಸಂಜೆ 6.30ರ ಸುಮಾರಿಗೆ ರಮೇಶ್ ಪಾನಮತ್ತನಾಗಿ ಮನೆಗೆ ಬಂದಿದ್ದ. ಆಗಲೂ ದಂಪತಿ ನಡುವೆ ಅದೇ ವಿಚಾರವಾಗಿ ಮಾತಿನ ಚಕಮಕಿ ನಡೆದು, ಅದು ರಾತ್ರಿ 9 ಗಂಟೆವರೆಗೂ ಮುಂದುವರಿದಿತ್ತು. ಈ ಹಂತದಲ್ಲಿ ಆರೋಪಿ ಪತ್ನಿಯ ಮೂಗಿಗೆ ಗುದ್ದಿದ್ದ. ಅವರು ನೆಲಕ್ಕೆ ಬಿದ್ದು ಪ್ರಜ್ಞೆ ತಪ್ಪಿದಾಗ ದಿಂಬಿನಿಂದ ಮುಖವನ್ನು ಒತ್ತಿ ಉಸಿರುಗಟ್ಟಿಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದರು. 

ಶವ ಹೊತ್ತುಕೊಂಡು ಬಂದ‌: ಪತ್ನಿ ಮೃತಪಟ್ಟ ನಂತರ ಫ್ಯಾನ್‌ಗೇ ವೇಲ್‌ ಕಟ್ಟಿದ ಆರೋಪಿ, ಅದನ್ನು ತಾನೇ ಕತ್ತರಿಸಿ ಶವವನ್ನು ಹೊತ್ತುಕೊಂಡು ಹೊರಗೆ ಬಂದಿದ್ದ. ‘ಪತ್ನಿ ನೇಣು ಹಾಕಿಕೊಂಡಿದ್ದಳು. ಆಕೆಯನ್ನು ನಾನೇ ಕುಣಿಕೆಯಿಂದ ಕೆಳಗಿಳಿಸಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದೇನೆ’ ಎಂದು ನಾಟಕ ಶುರು ಮಾಡಿದ್ದ. ಮೂಗಿನಿಂದ ರಕ್ತ ಸೋರುತ್ತಿರುವುದನ್ನು ಕಂಡ ವಠಾರದ ನಿವಾಸಿಗಳು, ದೇಹವನ್ನು ಕೆಳಗಿಳಿಸಿ ನೋಡಿದಾಗ ಅವರು ಮೃತಪಟ್ಟಿರುವುದು ಗೊತ್ತಾಗಿತ್ತು. ಕೂಡಲೇ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದರು.  ಸ್ಥಳಕ್ಕೆ ದೌಡಾಯಿಸಿದ ಎಲೆಕ್ಟ್ರಾನಿಕ್‌ ಸಿಟಿ ಪೊಲೀಸರು, ಸಂಶಯದ ಮೇಲೆ ರಮೇಶ್‌ ಬಾಬುನನ್ನು ವಶಕ್ಕೆ
ಪಡೆದರು.

ಪೊಲೀಸರ ಮುಂದೆಯೇ ಹೈಡ್ರಾಮಾ!

‘ಎಲ್ಲರ ಸಂಸಾರದಲ್ಲೂ ಜಗಳ ನಡೆಯುವಂತೆ, ಸಣ್ಣಪುಟ್ಟ ವಿಚಾರಕ್ಕೆ ನಮ್ಮಿಬ್ಬರ ನಡುವೆಯೂ ಆಗಾಗ್ಗೆ ಮನಸ್ತಾಪಗಳು ಬರುತ್ತಿದ್ದವು. ಈ ದಿನ ಸಂಜೆಯೂ ಅದೇ ರೀತಿ ಮಾತುಕತೆ ನಡೆದಿತ್ತು. ನಾನು ಹೊರಗೆ ಹೋಗಿ ಬರುವಷ್ಟರಲ್ಲಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಳು’ ಎಂದು ರಮೇಶ್ ವಿಚಾರಣೆ ಆರಂಭದಲ್ಲಿ ಹೇಳಿಕೆ ಕೊಟ್ಟಿದ್ದ. ಆದರೆ, ಸಂಜೆಯಿಂದಲೂ ನಿರಂತರವಾಗಿ ಜಗಳ ನಡೆಯುತ್ತಿದ್ದುದಾಗಿ ಸ್ಥಳೀಯರು ಹೇಳಿದ್ದರಿಂದ ವಿಚಾರಣೆ ತೀವ್ರಗೊಳಿಸಲಾಯಿತು. ಆ ನಂತರ ತಾನೇ ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡ ಎಂದು ‍ಪೊಲೀಸರು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 5

  Angry

Comments:

0 comments

Write the first review for this !