ಫೈನಾನ್ಶಿಯರ್‌ ಹತ್ಯೆ; ಸೈಕಲ್ ರವಿ ಪೊಲೀಸರ ವಶಕ್ಕೆ

7
ಸುಪಾರಿ ಪಡೆದು ಕೃತ್ಯವೆಸಗಿದ್ದ ರೌಡಿಯ ಸಹಚರರು

ಫೈನಾನ್ಶಿಯರ್‌ ಹತ್ಯೆ; ಸೈಕಲ್ ರವಿ ಪೊಲೀಸರ ವಶಕ್ಕೆ

Published:
Updated:
Deccan Herald

ಬೆಂಗಳೂರು: ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಗುಂಡು ಹಾರಿಸಿ ಸಿಸಿಬಿ ಪೊಲೀಸರು ಸೆರೆ ಹಿಡಿದಿರುವ ರೌಡಿ ಸೈಕಲ್‌ ರವಿಯನ್ನು, ಫೈನಾನ್ಶಿಯರ್‌ ಅವಿನಾಶ್‌ (29) ಹತ್ಯೆ ಪ್ರಕರಣ ಸಂಬಂಧ ಬನಶಂಕರಿ ಪೊಲೀಸರು ಸೋಮವಾರ ವಶಕ್ಕೆ ಪಡೆದಿದ್ದಾರೆ.

ಬೈಯನಪಾಳ್ಯದ ನಿವಾಸಿಯಾಗಿದ್ದ ಅವಿನಾಶ್‌ನನ್ನು 2016ರ ನವೆಂಬರ್ 2ರಂದು ಯಾರಬ್ ನಗರದಲ್ಲಿ ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಅವಿನಾಶ್‌ ತಾಯಿ ಇಂದ್ರಾ ನೀಡಿದ್ದ ದೂರಿನಡಿ ರವಿಯ ಸಹಚರರನ್ನು ಪೊಲೀಸರು ಬಂಧಿಸಿದ್ದರು. ಆದರೆ, ರವಿ ತಲೆಮರೆಸಿಕೊಂಡಿದ್ದ.

ಸಿಸಿಬಿಗೆ ಸಿಕ್ಕಿಬಿದ್ದ ಆತನನ್ನು ವಾರೆಂಟ್ ಮೂಲಕ ವಶಕ್ಕೆ ಪಡೆದ ಬನಶಂಕರಿ ಪೊಲೀಸರು, 3ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನ್ಯಾಯಾಲಯ, ಹೆಚ್ಚಿನ ವಿಚಾರಣೆಗಾಗಿ ಆರೋಪಿಯನ್ನು ಐದು ದಿನಗಳವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ.

ಸುಪಾರಿ ಪಡೆದು ಕೊಲೆ: ‘ಅವಿನಾಶ್ ಹಾಗೂ ಕಲಾಸಿಪಾಳ್ಯದ ಎಸ್ಎಂ ಟ್ರಾವೆಲ್ಸ್ ಮಾಲೀಕ ಅನಿಲ್‌ ಕುಮಾರ್ ನಡುವೆ ವೈಷಮ್ಯವಿತ್ತು. ಅನಿಲ್‌ನ ಕೊಲೆಗೆ ಯತ್ನಿಸಿದ್ದ ಅವಿನಾಶ್‌, ಜೈಲಿಗೂ ಹೋಗಿ ಬಂದಿದ್ದ’ ಎಂದು ಪೊಲೀಸರು ವಿವರಿಸಿದರು.

‘ಸೇಡು ತೀರಿಸಿಕೊಳ್ಳಲು ಮುಂದಾಗಿದ್ದ ಅನಿಲ್, ಅವಿನಾಶ್‌ನನ್ನು ಹತ್ಯೆ ಮಾಡಲು ಸುಪಾರಿ ನೀಡಿದ್ದ. ಅದರಂತೆ ಸೈಕಲ್ ರವಿಯ ಸಹಚರರಾದ ದೇವಿನಗರದ ದಿಲೀಪ್ ರಾಜು ಅಲಿಯಾಸ್ ಹುಚ್ಚಪ್ಪ, ಹನುಮಂತನಗರದ ರಾಘವೇಂದ್ರ ಅಲಿಯಾಸ್ ಬೇಕರಿ ರವಿ ಸೇರಿದಂತೆ ಹಲವರು ಅವಿನಾಶ್ ಮೇಲೆ ದಾಳಿ ಮಾಡಿ ಕೊಲೆ ಮಾಡಿದ್ದರು. ನಂತರ, ರವಿ ಹೊರತುಪಡಿಸಿ ಉಳಿದೆಲ್ಲ ಆರೋಪಿಗಳನ್ನು ಬಂಧಿಸಲಾಗಿತ್ತು’ ಎಂದು ಅವರು ಹೇಳಿದರು. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !