ನಿರ್ವಹಣೆಯಿಲ್ಲದೇ ಹಾಳಾಗುತ್ತಿರುವ ಸಮುದಾಯ ಶೌಚಾಲಯಗಳು

7

ನಿರ್ವಹಣೆಯಿಲ್ಲದೇ ಹಾಳಾಗುತ್ತಿರುವ ಸಮುದಾಯ ಶೌಚಾಲಯಗಳು

Published:
Updated:
ಅಫಜಪುರ ಪಟ್ಟಣದ ವಾರ್ಡ್ ನಂ 18ರಲ್ಲಿ ₹ 11 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿರುವ ಮಹಿಳಾ ಸಮುದಾಯ ಶೌಚಾಲಯ

ಅಫಜಲಪುರ: ಪಟ್ಟಣದಲ್ಲಿ ಪುರಸಭೆಯವರು ಕಳೆದ 5 – 6 ವರ್ಷಗಳಿಂದ 10ಕ್ಕೂ ಹೆಚ್ಚು ಸಮುದಾಯ ಶೌಚಾಲಯ ನಿರ್ಮಾಣ ಮಾಡಿದ್ದು, ಅವು ನಿರ್ವಹಣೆಯಿಲ್ಲದೇ ಹಾಳಾಗುತ್ತಿದ್ದು, ಮಹಿಳೆಯರು ಶೌಚಾಲಯಕ್ಕಾಗಿ ಪರದಾಡುವಂತಾಗಿದೆ.

ಪಟ್ಟಣದ 6, 4 ಹಾಗೂ 2, 14 ಮತ್ತು 7ನೇ ವಾರ್ಡ್‌ಗಳಲ್ಲಿ ಸಮುದಾಯ ಶೌಚಾಲಯ ಪ್ರತಿಯೊಂದಕ್ಕೆ ₹ 10 – 11 ಲಕ್ಷ ಖರ್ಚು ಮಾಡಿ ನಿರ್ಮಾಣ ಮಾಡಲಾಗಿದೆ. ಆದರೆ ಅವುಗಳ ನಿರ್ವಹಣೆಗೆ ತೊಂದರೆ ಆಗುತ್ತಿದೆ. ನಿರ್ವಹಣೆ ಮಾಡಲು ಯಾರು ಮುಂದೆ ಬರುತ್ತಿಲ್ಲ ಮತ್ತು ಆ ವಾರ್ಡ್‌ನ ಮಹಿಳೆಯರು ಹಣ ನೀಡಿ ಶೌಚಾಲಯ ಉಪಯೋಗ ಮಾಡುತ್ತಿಲ್ಲ. ಹೀಗಾಗಿ ಪುರಸಭೆಯವರಿಗೆ ಶೌಚಾಲಯ ನಿರ್ವಹಣೆ ಕಷ್ಟಕರವಾಗುತ್ತಿದೆ. ವಿವಿಧ ಅನುದಾನದಲ್ಲಿ ಪ್ರತಿ ವರ್ಷ ವಿವಿಧ ವಾರ್ಡ್‌ಗಳಲ್ಲಿ ಸಮುದಾಯ ಶೌಚಾಲಯ ನಿರ್ಮಾಣ ಮಾಡಲಾಗುತ್ತಿದೆ. ಆದರೆ ಅವುಗಳ ಬಳಕೆ ಸಾಧ್ಯವಾಗುತ್ತಿಲ್ಲ ಹೀಗಾಗಿ ಮಹಿಳೆಯರಿಗೆ ಶೌಚಾಲಯ ದೊಡ್ಡ ಸಮಸ್ಯೆಯಾಗಿದೆ.

ಈ ಕುರಿತು ಪುರಸಭೆಯ ಕಿರಿಯ ಎಂಜನೀಯರ್‌ ಶಾಂತಪ್ಪ ಸಿ. ಹೊಸುರ ಮಾಹಿತಿ ನೀಡಿ ನಾವು ಈಗಾಗಲೇ ಪಟ್ಟಣದಲ್ಲಿ 10ಕ್ಕೂ ಹೆಚ್ಚು ಸಮುದಾಯ ಶೌಚಾಲಯ ನಿರ್ಮಾಣ ಮಾಡಿದ್ದೇವೆ. ಅವು ನಿರ್ವಹಣೆಗಾಗಿ ಟೆಂಡರ್ ಕರೆದರೂ ಯಾರು ಬರುತ್ತಿಲ್ಲ. ಕೆಲವು ಸಲ ಬಂದರು ನಡುವೆ ಬಿಟ್ಟು ಹೋಗುತ್ತಾರೆ. ಹೀಗಾಗಿ ನಮಗೆ ಶೌಚಾಲಯ ನಿರ್ಮಾಣ ಮಾಡುವಕ್ಕಿಂತಲೂ ನಿರ್ವಹಣೆ ಸಮಸ್ಯೆಯಾಗಿದೆ. ಸದ್ಯಕ್ಕೆ 18ನೇ ವಾರ್ಡ್‌ನಲ್ಲಿ 14ನೇ ಹಣಕಾಸು ಮತ್ತು ಸ್ವಚ್ಛ ಭಾರತ ಮಿಷನ್‌ 2ರ ಸಹಯೋಗದಲ್ಲಿ ಸುಮಾರು ₹ 11 ಲಕ್ಷದಲ್ಲಿ ಸಮುದಾಯ ಶೌಚಾಲಯ ನಿರ್ಮಾಣ ಮಾಡಿದ್ದೇವೆ. ವಾರದಲ್ಲಿ ಉದ್ಘಾಟನೆ ಮಾಡಲಾಗುತ್ತಿದೆ. ಅದು ಸಹ ನಿರ್ವಹಣೆಗೆ ತೊಂದರೆ ಆಗಲಿದೆ ಎಂದು ತಿಳಿಸಿದರು.

ಪಟ್ಟಣಕ್ಕೆ ಕುಡಿಯುವ ನೀರಿನ ತೊಂದರೆ ಆಗುತ್ತಿದೆ: ತಾಲ್ಲೂಕಿನಲ್ಲಿ ಮಳೆಯಾಗದ ಕಾರಣ ರೈತರು ಬೆಳೆಗಳಿಗಾಗಿ ಭೀಮಾನದಿಯಿಂದ ನೀರು ಬಳಸಿಕೊಳ್ಳುತ್ತಿದ್ದು, ಕುಡಿಯುವ ನೀರಿಗಾಗಿ ಸೊನ್ನ ಭೀಮಾ ಬ್ಯಾರೇಜ್‌ನಿಂದ 20 ಜೂನ್‌ 2018ರಿಂದ ಜುಲೈ 5,2018ರವರೆಗೆ 0.01 ಟಿಎಂಸಿ ಕುಡಿಯುವದಕ್ಕಾಗಿ ಪಟ್ಟಣಕ್ಕೆ ನೀರು ಬಿಡುವುದಾಗಿ ಪ್ರಾದೇಶಿಕ ಆಯುಕ್ತರು ವಿಭಾಗ ಕಲಬುರ್ಗಿ ಹರೀಶ ಗುಪ್ತಾ ಅವರು ಆದೇಶ ಮಾಡಿದ್ದಾರೆ. ಆದರೆ ಬಿಟ್ಟಿರುವ ನೀರು ಕೃಷಿಗೆ ಹೋಗುತ್ತಿದೆ. ಕುಡಿಯಲು ನೀರು ಉಳಿಯುತ್ತಿಲ್ಲ. ಏಪ್ರೀಲ್‌, ಮೇ ಎರಡು ತಿಂಗಳು ಮಾತ್ರ ನದಿಯ ನೀರು ರೈತರು ಬಳಸಿಕೊಳ್ಳುವಂತೆ ಆದೇಶವಿದೆ ಹೀಗಾಗಿ ಈಗ ಜೂನ್ ತಿಂಗಳು ಕೊನೆಯ ವಾರ ಬಂದಿದೆ. ಈ ಕುರಿತು ರೈತರಿಗೆ ಕೇಳಲು ಬರುವುದಿಲ್ಲ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !