ಜಿಗಜಿಣಗಿ ಭಯೋತ್ಪಾದಕನಿದ್ದಂತೆ; ದೇವಾನಂದ

ಮಂಗಳವಾರ, ಏಪ್ರಿಲ್ 23, 2019
31 °C
ಮೈತ್ರಿ ಅಭ್ಯರ್ಥಿ ಸುನೀತಾ ಚವ್ಹಾಣ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಕೆ

ಜಿಗಜಿಣಗಿ ಭಯೋತ್ಪಾದಕನಿದ್ದಂತೆ; ದೇವಾನಂದ

Published:
Updated:
Prajavani

ವಿಜಯಪುರ: ‘ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಭಯೋತ್ಪಾದಕನಿದ್ದಂತೆ’ ಎಂದು ನಾಗಠಾಣ ಶಾಸಕ ದೇವಾನಂದ ಚವ್ಹಾಣ ವಾಗ್ದಾಳಿ ನಡೆಸಿದರು.

‘ವಿಜಯಪುರ ಜಿಲ್ಲೆಗೆ ಜಿಗಜಿಣಗಿ ಕೊಡುಗೆ ಶೂನ್ಯ. ಸಾಧನೆಯೂ ಏನಿಲ್ಲ. ಸುಳ್ಳು ಭರವಸೆ ನೀಡುವವರು, ಜನರ ಯಾವೊಂದು ಕೆಲಸ ಮಾಡದವರು ಭಯೋತ್ಪಾದಕರೇ’ ಎಂದು ಮಂಗಳವಾರ ತಮ್ಮನ್ನು ಭೇಟಿಯಾದ ಮಾಧ್ಯಮದವರ ಬಳಿ ಪ್ರತಿಕ್ರಿಯಿಸಿದರು.

‘ಜಿಗಜಿಣಗಿ ಬಣ್ಣದ ಮಾತಿನ ರಾಜ. ಎದುರು ಸಿಕ್ಕವರಿಗೆ ಕೈ ಮುಗಿದು, ಕಾಕಾ, ಮಾಮಾ, ಬಾಬಾ ಎಂದುಕೊಂಡೇ ರಾಜಕೀಯ ನಡೆಸುವರು. ಏನೊಂದು ಅಭಿವೃದ್ಧಿ ಮಾಡದವರು’ ಎಂದು ದೇವಾನಂದ ಕಟುವಾಗಿ ಟೀಕಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ.ಮನಗೂಳಿ ಮಾತನಾಡಿ ‘ರೈತರಿಗೆ ಮೋದಿ ಏನು ಅನುಕೂಲ ಮಾಡಿಕೊಟ್ಟಿಲ್ಲ. ನೋಟ್‌ ಬ್ಯಾನ್‌ನಿಂದ ಜನ ಬಾಳಾ ತ್ರಾಸ್‌ ಪಟ್ಟ್ಕೊಂಡ್ವಾರೆ. ಈ ಚುನಾವಣೆಯಲ್ಲಿ ಇದಕ್ಕೆಲ್ಲ ತಕ್ಕ ಉತ್ತರ ನೀಡಲಿದ್ದಾರೆ’ ಎಂದು ಹೇಳಿದರು.

‘ಕಾಂಗ್ರೆಸ್ ಸಚಿವರು, ಶಾಸಕರು, ಮುಖಂಡರ ಜತೆ ಮಾತುಕತೆ ನಡೆಸಿರುವೆ. ಎಲ್ಲರೂ ಒಟ್ಟಾಗಿ ಗೆಲುವಿಗೆ ಶ್ರಮಿಸುತ್ತಿದ್ದೇವೆ’ ಎಂದು ಮನಗೂಳಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ರಾಜಕಾರಣದಲ್ಲಿ ಹಿರಿಯರು–ಕಿರಿಯರು ಎಂಬುದಿರಲ್ಲ. ಸ್ಪರ್ಧೆ ಸ್ಪರ್ಧೆಯೇ. ಗೆಲುವಿನ ದಾರಿಯಲ್ಲಿ ನಾವು ಈಗಾಗಲೇ ಬಹಳ ಮುಂದಿದ್ದೇವೆ’ ಎಂದು ಮೈತ್ರಿ ಅಭ್ಯರ್ಥಿಯಾಗಿ ಮಂಗಳವಾರ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ ಸುನೀತಾ ಚವ್ಹಾಣ ತಿಳಿಸಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !