ಹಿಂದುಳಿದ ಪ್ರದೇಶಗಳನ್ನು ಗುರುತಿಸಿ, ಹಲವು ವರ್ಷದ ಸಮಸ್ಯೆಗೆ ಮುಕ್ತಿ

7

ಹಿಂದುಳಿದ ಪ್ರದೇಶಗಳನ್ನು ಗುರುತಿಸಿ, ಹಲವು ವರ್ಷದ ಸಮಸ್ಯೆಗೆ ಮುಕ್ತಿ

Published:
Updated:
Prajavani

ವಿಜಯಪುರ: ‘ಅಭಿವೃದ್ಧಿಯಲ್ಲಿ ಹಿಂದುಳಿದ ಪ್ರದೇಶಗಳನ್ನು ಗುರುತಿಸಿ, ಅವಶ್ಯ ಇರುವ ಮೂಲ ಸೌಕರ್ಯ ಕಲ್ಪಿಸುವ ಮೂಲಕ ಹಲವು ವರ್ಷಗಳ ಸಮಸ್ಯೆಗೆ ಮುಕ್ತಿ ನೀಡುವುದಾಗಿ’ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ನಗರದ ಎಪಿಎಂಸಿ ಮಾರುಕಟ್ಟೆ ಪ್ರಾಂಗಣದ ಆಯ್ದ ರಸ್ತೆ ಡಾಂಬರೀಕರಣ, ಪಾದಚಾರಿ ಮಾರ್ಗ ನಿರ್ಮಾಣದ ಹಾಗೂ ಶೌಚಾಲಯ ಕಾಮಗಾರಿಗೆ ಬುಧವಾರ ಭೂಮಿ ಪೂಜೆ ನೆರವೇರಿಸಿದ ಅವರು ಮಾತನಾಡಿದರು.

‘ನಗರದಲ್ಲಿ ಹಲವು ವರ್ಷಗಳಿಂದ ಸಾಕಷ್ಟು ಬಡಾವಣೆಗಳಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯಲು ಜನರು ತುಂಬಾ ಸಮಸ್ಯೆ ಅನುಭವಿಸುತ್ತಿದ್ದರು. ಇದೀಗ ಅಂಥ ಪ್ರದೇಶ ಗುರುತಿಸಿ ಅವಶ್ಯ ಇರುವ ಒಳ ಚರಂಡಿ, ನೀರಿನ ವ್ಯವಸ್ಥೆ, ಸಿಸಿ ರಸ್ತೆ, ರಸ್ತೆ ಡಾಂಬರೀಕರಣ ಕೆಲಸ ಮಾಡುವ ಮೂಲಕ ಈವರೆಗೆ ಅನುಭವಿಸಿದ ಯಾತನೆಗೆ ಅಂತ್ಯ ಹಾಡುತ್ತಿರುವುದಾಗಿ’ ತಿಳಿಸಿದರು.

‘ಜನರ ಸಮಸ್ಯೆ ಪರಿಹಾರದ ಜತೆಗೆ ಹಲವು ದೇಗುಲಗಳ ಜೀರ್ಣೋದ್ಧಾರ ಮತ್ತು ಸಮುದಾಯ ಭವನ ನಿರ್ಮಾಣಕ್ಕೆ ಶಾಸಕರ ನಿಧಿಯಿಂದ ಸಾಕಷ್ಟು ಅನುದಾನ ನೀಡಿದ್ದೇನೆ. ಭೂಮಿ ಪೂಜೆ ಮಾಡಿದ ಎಲ್ಲ ಕಾಮಗಾರಿಗಳನ್ನು ಮೂರು ತಿಂಗಳಲ್ಲಿ ಮುಗಿಸಿ’ ಎಂದು ಸಂಬಂಧಿಸಿದವರಿಗೆ ಸೂಚನೆ ನೀಡಿದರು.

ಡಿವೈಎಸ್‌ಪಿ ಡಿ.ಅಶೋಕ, ಎಪಿಎಂಸಿ ಅಧ್ಯಕ್ಷ ಸಾಹೇಬಗೌಡ ಪಾಟೀಲ, ಉಪಾಧ್ಯಕ್ಷ ಸುರೇಶ ತಳವಾರ, ಪಾಲಿಕೆ ಸದಸ್ಯರಾದ ರಾಹುಲ್‌ ಜಾಧವ, ಉಮೇಶ ವಂದಾಲ, ಪರಶುರಾಮ ರಜಪೂತ, ಶಿವಾನಂದ ಭುಯ್ಯಾರ, ರವಿ ಬಿಜ್ಜರಗಿ, ನೀಲೇಶ ಶಹಾ, ಜಯಾನಂದ ತಾಳಿಕೋಟಿ, ಪ್ರವೀಣ ವಾರದ, ರಮೇಶ ನಿಡೋಣಿ, ಮನೋಜ ಬಗಲಿ, ಸಿದ್ದಪ್ಪ ಸಜ್ಜನ, ಪಾಪುಸಿಂಗ್ ರಜಪೂತ, ಸುಭಾಶ ಸುಗಂಧಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !