ಶಾಂತಿ ಮಾತುಕತೆ ವಿಫಲ: ಯುದ್ಧದ ಭೀತಿ

7

ಶಾಂತಿ ಮಾತುಕತೆ ವಿಫಲ: ಯುದ್ಧದ ಭೀತಿ

Published:
Updated:

ದುಬೈ: ಯೆಮೆನ್‌ ಸರ್ಕಾರ ಮತ್ತು ಹುಥಿ ಬಂಡುಕೋರರ ನಡುವೆ ಶಾಂತಿ ಮಾತುಕತೆ ನಡೆಸುವ ವಿಶ್ವಸಂಸ್ಥೆಯ ಪ್ರಯತ್ನ ವಿಫಲವಾಗಿದ್ದು, ದೇಶದಲ್ಲಿ ಯುದ್ಧದ ಭೀತಿ ಹೆಚ್ಚಿಸಿದೆ. 

ಇರಾನ್‌ನೊಂದಿಗೆ ಸಂಪರ್ಕ ಹೊಂದಿರುವ ಬಂಡುಕೋರರು ಶಾಂತಿ ಸಭೆಗೆ ಗೈರು ಹಾಜರಾಗಿ, ಬಿಕ್ಕಟ್ಟು ಮುಂದುವರಿಸಿದ್ದಾರೆ. ಪರಿಣಾಮ, ಸೌದಿ ಬೆಂಬಲಿತ ಪಡೆಗಳು ಹಾಗೂ ಬಂಡುಕೋರರ ನಡುವೆ ಹಿಂಸಾಚಾರ ಭುಗಿಲೇಳುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಹೇಳಿದ್ದಾರೆ. 

ಯೆಮೆನ್‌ನಲ್ಲಿ ಸೌದಿ ಸರ್ಕಾರವು ಮೂರು ವರ್ಷಗಳಿಂದ ನಿರಂತರ ಬಾಂಬ್‌ ದಾಳಿ ನಡೆಸುತ್ತಿದ್ದು, ಲಕ್ಷಾಂತರ ನಾಗರಿಕರು ಸಾವಿಗೀಡಾಗಿದ್ದಾರೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 1

    Frustrated
  • 0

    Angry

Comments:

0 comments

Write the first review for this !