ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಗಲಕೋಟೆ | ಮೈದುಂಬಿ ಹರಿಯುತ್ತಿರುವ ಕೋಟೇಕಲ್‌ ಜಲಪಾತ: ಪ್ರವಾಸಿಗರ ದಂಡು

Published 22 ಮೇ 2024, 15:53 IST
Last Updated 22 ಮೇ 2024, 15:53 IST
ಅಕ್ಷರ ಗಾತ್ರ

ಗುಳೇದಗುಡ್ಡ: ತಾಲ್ಲೂಕಿನ ಕೋಟೆಕಲ್ ಗ್ರಾಮದ ಗುಡ್ಡದ ಮೇಲಿರುವ ದಿಡಿಗಿನ ಹಳ್ಳದ ಜಲಪಾತ ಮೈದುಂಬಿ ಹರಿಯುತ್ತಿದ್ದು ಪ್ರವಾಸಿಗರು ಹಾಗೂ ಶಾಲಾ ಕಾಲೆಜು ರಜೆ ಇರುವುದರಿಂದ ವಿದ್ಯಾರ್ಥಿಗಳ ದಂಡು ಜಲಪಾತದಲ್ಲಿ ಕಂಡುಬಂತು.

ಬುಧವಾರ ಬೆಳಿಗ್ಗೆಯಿಂದಲೆ ಗುಳೇದಗುಡ್ಡ ಸುತ್ತಮುತ್ತಲಿನ ಹಳ್ಳಿಗಳ ಜನರು ಹಾಗೂ ಕಮತಗಿ, ನಂದಿಕೇಶ್ವರ ಮುಂತಾದ ಸ್ಥಳಗಳಿಂದ ವಿದ್ಯಾರ್ಥಿಗಳು ಬಂದಿದ್ದರು. ಬಿಸಿಲು ಹೆಚ್ಚಿದ್ದರಿಂದ ಜಲಪಾತದದಲ್ಲಿ ಸ್ನಾನ ಮಾಡಿ ಸಂಭ್ರಮಿಸಿದರು.

ಗುಳೇದಗುಡ್ಡ ಗುರುಸಿದ್ದೇಶ್ವರ ಮಹಿಳಾ ಬಿ.ಇಡಿ ಕಾಲೇಜಿನಿಂದ ನೂರಾರು ವಿದ್ಯಾರ್ಥಿನಿಯರು ಜಲಪಾತಕ್ಕೆ ಬಂದು ಸಂಭ್ರಮಿಸಿದರು. ನಮ್ಮ ಬಯಲು ಸೀಮೆಯಲ್ಲಿ ಜಲಪಾತ ಹರಿಯುತ್ತಿರುವುದು ಹೆಮ್ಮೆ ಮತ್ತು ಖುಷಿ ತಂದಿದೆ ಎಂದು ಉಪನ್ಯಾಸಕಿ ಸರಿತಾ ಚಂದನ್ನವರ ಹೇಳಿದರು.

ನೀರು ಮೇಲಿಂದ ಬೀಳುವುದರಿಂದ ಇಲ್ಲಿ ಸ್ನಾನ ಮಾಡಿ ಸಮಯ ಕಳೆಯುವುದು ಸಂತಸ ಇಮ್ಮಡಿಗೊಳಿಸಿದೆ ಎಂದು ಕಮತಗಿಯ ನಾಗಪ್ಪ ಕೆಂಪಾರ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT