ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷ ಸಂಘಟನೆ ಮಾಡಿ: ಸಂಸದ ಪಿ.ಸಿ.ಗದ್ದಿಗೌಡರ

Published 14 ಮಾರ್ಚ್ 2024, 14:44 IST
Last Updated 14 ಮಾರ್ಚ್ 2024, 14:44 IST
ಅಕ್ಷರ ಗಾತ್ರ

ಬಾದಾಮಿ: ‘ಈ ಬಾರಿ ಚುನಾವಣೆಯಿಂದ ಹಿಂದೆ ಸರಿಯಬೇಕೆಂಬ ಉದ್ದೇಶವನ್ನು ಮುಖಂಡರಿಗೆ ತಿಳಿಸಿದ್ದೆ. ಆದರೆ ಬಾಗಲಕೋಟೆ ಲೋಕಸಭೆ ಮತಕ್ಷೇತ್ರಕ್ಕೆ ಮತ್ತೆ ನನಗೆ ಐದನೇ ಬಾರಿ ಟಿಕೆಟ್ ಘೋಷಣೆ ಮಾಡಿದ್ದಾರೆ. ಹೆಚ್ಚು ಮತಗಳ ಅಂತರದಿಂದ ನನ್ನನ್ನು ಗೆಲ್ಲಿಸಿ ಪ್ರಧಾನಿ ಮೋದಿ ಅವರ ಕೈ ಬಲಪಡಿಸಬೇಕು’ ಎಂದು ಸಂಸದ ಪಿ.ಸಿ.ಗದ್ದಿಗೌಡರ ವಿನಂತಿಸಿಕೊಂಡರು.

ಇಲ್ಲಿನ ಶಿವಯೋಗಮಂದಿರ ಸಂಸ್ಥೆಯ ಸದಾಶಿವ ಸಭಾ ಮಂಟಪದಲ್ಲಿ ಗುರುವಾರ ಬಾದಾಮಿ ಬಿಜೆಪಿ ಮಂಡಲದ ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ನೂತನ ಪದಾಧಿಕಾರಿಗಳು ಪಕ್ಷ ಸಂಘಟನೆ ಮಾಡಬೇಕು ಎಂದರು.

‘ಪ್ರಧಾನಿ ನರೇಂದ್ರ ಮೋದಿ ಅವರು 10 ವರ್ಷಗಳ ಅವಧಿಯಲ್ಲಿ ವಿಶ್ರಾಂತಿ ಪಡೆಯದೇ ದೇಶದ ಅಭಿವೃದ್ಧಿ ಮತ್ತು ಜನಕಲ್ಯಾಣ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದಾರೆ. ವಿಶ್ವದಲ್ಲಿಯೇ ದೇಶದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಮೂರನೇ ಬಾರಿ ಮತ್ತೆ ಮೋದಿ ಪ್ರಧಾನಿಯಾಗಲು ಪಕ್ಷದ ಕಾರ್ಯಕರ್ತರು ಶ್ರಮಿಸಬೇಕು’ ಎಂದು ಹೇಳಿದರು.

 ಬಾಗಲಕೋಟೆ ಜಿಲ್ಲಾ ಘಟಕದ ಬಿಜೆಪಿ ಅಧ್ಯಕ್ಷ ಶಾಂತಗೌಡ ಪಾಟೀಲ, ‘ರಾಜ್ಯದಲ್ಲಿ ಭೀಕರ ಬರಗಾಲ ಇದ್ದು, ನೀರಿಗಾಗಿ ಹಾಹಾಕಾರ ನಡೆದಿದೆ. ಮೇವಿನ ಕೊರತೆ ಇದೆ. ಸರ್ಕಾರಕ್ಕೆ ರೈತರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲ. ಇಂತಹ ಸ್ಥಿತಿಯಲ್ಲಿ ಸಿದ್ದರಾಮಯ್ಯ ಸರ್ಕಾರ ಗ್ಯಾರಂಟಿ ಯೋಜನೆ ಸಮಾರಂಭಕ್ಕಾಗಿ ವ್ಯರ್ಥವಾಗಿ ಸರ್ಕಾರದ ಹಣವನ್ನು  ಪೋಲು ಮಾಡುತ್ತಿದೆ’ ಎಂ ದುಸರ್ಕಾರದ ಧೋರಣೆಯನ್ನು ತರಾಟೆಗೆ ತೆಗೆದುಕೊಂಡರು.

‘ಎಲ್ಲ ಪದಾಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಸಂಘಟನೆಗಾಗಿ ದುಡಿಯುವೆ’ ಎಂದು ಬಾದಾಮಿ ಮಂಡಲದ ನೂತನ ಅಧ್ಯಕ್ಷ ನಾಗರಾಜ ಕಾಚಟ್ಟಿ ಮಾತನಾಡಿದರು.

ಕೃಷ್ಣಾ ಕಾಡಾ ನಿಗಮದ ಮಾಜಿ ಅಧ್ಯಕ್ಷ ಬಿ.ಪಿ.ಹಳ್ಳೂರ ಮೂರು ದಶಕಗಳ ಹಿಂದೆ ಪಕ್ಷವನ್ನು ಸಂಘಟಿಸಿದ ಬಗ್ಗೆ ಮಾತನಾಡಿದರು.

ಶಿವನಗೌಡ ಸುಂಕದ, ಎಫ್.ಆರ್. ಪಾಟೀಲ, ಮುತ್ತು ಉಳ್ಳಾಗಡ್ಡಿ, ಹೊನ್ನಯ್ಯ ಹಿರೇಮಠ, ಭಾಗ್ಯ ಉದ್ನೂರ, ಜಯಶ್ರೀ ದಾಸಮನಿ, ಎನ್.ಎಸ್. ಬೊಮ್ಮನಗೌಡರ, ಆಸಂಗೆಪ್ಪ ನಕ್ಕರಗುಂದಿ, ಪ್ರಮೋದ ಕವಡಿಮಟ್ಟಿ ಮೊದಲಾದ ಮುಖಂಡರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಬಾದಾಮಿ ಮತಕ್ಷೇತ್ರದ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT