ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಶಾಂತಿಗಾಗಿ ಕೆಲಸ ಮಾಡುವ ಬ್ರಹ್ಮಕುಮಾರಿ ಈಶ್ವರೀಯ ವಿವಿ 

Published 10 ಮಾರ್ಚ್ 2024, 14:21 IST
Last Updated 10 ಮಾರ್ಚ್ 2024, 14:21 IST
ಅಕ್ಷರ ಗಾತ್ರ

ಇಳಕಲ್‌: ಮಹಿಳೆಯರ ನೇತೃತ್ವದಲ್ಲಿ ವಿಶ್ವಶಾಂತಿಗಾಗಿ ಕೆಲಸ ಮಾಡುತ್ತಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಜಗತ್ತಿನ ಯಾವುದೇ ಶಾಖೆಗೆ ಭೇಟಿ ನೀಡಿದರೂ ಅಧ್ಯಾತ್ಮ ಹಾಗೂ ನೆಮ್ಮದಿ ದೊರೆಯುತ್ತದೆʼ ಎಂದು ನಗರಸಭೆ ಸದಸ್ಯೆ ಶೋಭಾ ಆಮದಿಹಾಳ ಹೇಳಿದರು.

ಇಲ್ಲಿಯ ಬ್ರಹ್ಮಕುಮಾರಿ ಧ್ಯಾನಕೇಂದ್ರದಲ್ಲಿ ಶಿವರಾತ್ರಿ ನಿಮಿತ್ತ ನಡೆದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಿದ್ದಣ್ಣ ಬೊಮ್ಮಸಾಗರ ಮಾತನಾಡಿ, ‘ಶಿವಯೋಗದಂದು ಭಗವಂತನ ನಾಮಸ್ಮರಣೆಯಿಂದ ಮನಸ್ಸಿಗೆ ಶಾಂತಿ ದೊರೆಯುತ್ತದೆʼ ಎಂದರು.

ಅಧ್ಯಕ್ಷತೆ ವಹಿಸಿದ್ದ ಬ್ರಹ್ಮಕುಮಾರಿ ಧ್ಯಾನಕೇಂದ್ರದ ಸಂಚಾಲಕಿ ಬಿ.ಕೆ. ಅನುಸೂಯಾ ಮಾತನಾಡಿ, ‘140 ದೇಶಗಳಲ್ಲಿ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಧ್ಯಾನಕೇಂದ್ರಗಳಿವೆʼ ಎಂದು ಹೇಳಿದರು.

ಮಹಾಂತೇಶ ಗೊರಜನಾಳ, ಲತಾ, ಸುಗುಣ ಮಾತನಾಡಿದರು. ಗಾಯತ್ರಿ ಪ್ರಾರ್ಥಿಸಿದರು. ಕರಬಸಪ್ಪ ತುಪ್ಪದ ಸ್ವಾಗತಿಸಿದರು. ಅಕ್ಕಮ್ಮ ಗುಂಡ್ಮಿ ವಂದಿಸಿದರು. ಸುಭದ್ರಮ್ಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT