ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೂರ | ಬಿಜೆಪಿ ನಿದ್ದೆಗೆಡಿಸಿದ ಗ್ಯಾರಂಟಿ

ಪ್ರಚಾರ ಸಭೆ; ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ ಹೇಳಿಕೆ
Published 28 ಏಪ್ರಿಲ್ 2024, 15:44 IST
Last Updated 28 ಏಪ್ರಿಲ್ 2024, 15:44 IST
ಅಕ್ಷರ ಗಾತ್ರ

ಕೆರೂರ: ‘ಸುಳ್ಳು ‌ಹೇಳಿ ಜನರನ್ನು ‌ನಂಬಿಸಿ, ಅಧಿಕಾರ‌ ಗದ್ದುಗೆ ಹಿಡಿದಿರುವ ಬಿಜೆಪಿಗೆ ಗ್ಯಾರಂಟಿ ಯೋಜನೆಗಳು ನಿದ್ದೆಗೆಡಿಸಿವೆ’ ಎಂದು ಬಾಗಲಕೋಟೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ ಹೇಳಿದರು.

ಸಮೀಪದ ಮುಷ್ಠಿಗೇರಿ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳಲ್ಲಿ ಪ್ರಚಾರ ಸಭೆ ನಡೆಸಿ ಮಾತನಾಡಿದರು.

‘ಶಕ್ತಿ ಯೋಜನೆಯಿಂದ ಮಹಿಳೆಯರು ದಾರಿ ತಪ್ಪುತ್ತಿದ್ದಾರೆಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರೆ,  ಚಿತ್ರ ನಟಿ ಶ್ರುತಿ ಸಹ ಅಂಥದ್ದೇ ಟೀಕೆ ಮಾಡಿದ್ದಾರೆ. ಮಹಿಳೆಯಾಗಿ ಸ್ತ್ರೀ ಸಮೂಹಕ್ಕೆ ಅಪಮಾನ ಮಾಡಿರುವುದು ನಾಚಿಕೆಗೇಡು. ಯಾರಾದರೂ ಮಹಿಳೆ ದಾರಿ ತಪ್ಪಿದ‌ ಉದಾಹರಣೆ‌ ಇದೆಯಾ’ ಎಂದು ಪ್ರಶ್ನಿಸಿದರು.

‘ಲಕ್ಷಾಂತರ ಕುಟುಂಬಗಳಿಗೆ ಗ್ಯಾರಂಟಿ ಯೋಜನೆಗಳು ಆಸರೆಯಾಗಿವೆ. ಆದರೆ, ಬಿಜೆಪಿ ನಾಯಕರು ಸೋಲಿನ ಹತಾಶೆಯಿಂದ ಕೀಳುಮಟ್ಟದ ಹೇಳಿಕೆ ನೀಡುತ್ತಿದ್ದಾರೆ. ಸುಳ್ಳು ಹೇಳುವುದೇ ಅವರ ಕೆಲಸವಾಗಿದೆ’ ಎಂದು ಆರೋಪಿಸಿದರು.

ಶಾಸಕ ಭೀಮಸೇನ ಚಿಮ್ಮನಕಟ್ಟಿ ಮಾತನಾಡಿದರು, ಮಾಂತೇಶ ಹಟ್ಟಿ, ಶಿವು ಕೊನೇರಿ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಪದ್ಮಾವತಿ ಡೊಳ್ಳಿನ, ಶಕುಂತಲಾ ಹರಣಶಿಕಾರಿ, ಭೀರಪ್ಪ ಪೆಂಟಿ, ಬಸಪ್ಪ ಹೊಸಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT